ADVERTISEMENT

Mehrauli Murder: ದೆಹಲಿಯ ಕೊಲೆ ಕೃತ್ಯಕ್ಕೆ ಅಮೆರಿಕದ ಕ್ರೈಂ ಶೋ ಪ್ರೇರಣೆ

ಐಎಎನ್ಎಸ್
Published 26 ನವೆಂಬರ್ 2022, 11:30 IST
Last Updated 26 ನವೆಂಬರ್ 2022, 11:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವ್ಯಕ್ತಿಯೊಬ್ಬ ಪ್ರೇಯಸಿಯ ಕತ್ತುಸೀಳಿ ಕೊಂದು, ಆಕೆಯ ದೇಹವನ್ನು ಸುಮಾರು 35 ಭಾಗಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಎಸೆದಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಶ್ರದ್ಧಾ ವಾಲ್ಕರ್‌ ಮೃತ ಮಹಿಳೆ. ಅಫ್ತಾಬ್ ಅಮೀನ್‌ ಪೂನಾವಾಲ ಬಂಧಿತ ಆರೋಪಿಯಾಗಿದ್ದಾನೆ.

ನರಹತ್ಯೆಯ ಕಥೆ ಹೇಳುವ ಅಮೆರಿಕನ್ ಕ್ರೈಂ ಶೋ 'ಡೆಕ್ಸ್ಟರ್'‌ನಿಂದ ಪ್ರೇರಣೆ ಪಡೆದು ಅಫ್ತಾಬ್ ಈ ಭೀಕರ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ADVERTISEMENT

ಬಾಣಸಿಗನಾಗಿದ್ದ ಅಫ್ತಾಬ್ ಚಾಕು ಬಳಕೆಯಲ್ಲಿ ನಿಪುಣನಾಗಿದ್ದ ಎಂದು ಮೂಲಗಳು ಹೇಳಿವೆ. ಆದರೆ ಕೃತ್ಯಕ್ಕೆ ಬಳಸಿದ ಚಾಕು ಇನ್ನಷ್ಟೇ ಪತ್ತೆಯಾಗಬೇಕಿದೆ.

ಆರೋಪಿಯನ್ನು ಮೆಹ್ರೌಲಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದ ಪೊಲೀಸರು, ದೇಹದ ಭಾಗಗಳನ್ನು ಹೊರತೆಗೆದರು.

ಯಾರಿಗೂ ಸಂಶಯ ಬರದಿರಲು ಆರೋಪಿ ಮಧ್ಯರಾತ್ರಿ 2 ಗಂಟೆಗೆ ಮನೆಯಿಂದ ಹೊರ ತೆರಳಿ ದೇಹದ ಭಾಗಗಳನ್ನು ಎಸೆದು ಬರುತ್ತಿದ್ದ. ಕೊಳೆತ ವಾಸನೆ ಬರದಿರಲು ಊದುಬತ್ತಿ ಬಳಕೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಲಿವಿಂಗ್ ರಿಲೇಷನ್‌ನಲ್ಲಿದ್ದ ಪ್ರೇಯಸಿಯನ್ನು ಕೊಲೆಗೈಯಲಾಗಿದ್ದು, ಸುಮಾರು ಆರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.