ADVERTISEMENT

#MeToo ಆರೋಪ: ಎಂ.ಜೆ.ಅಕ್ಬರ್‌ ಮಾನನಷ್ಟ ಮೊಕದ್ದಮೆ ತೀರ್ಪು ಫೆ.17ಕ್ಕೆ ಮುಂದೂಡಿಕೆ

ದೆಹಲಿ ಕೋರ್ಟ್‌ನಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಪ್ರಕರಣ

ಪಿಟಿಐ
Published 10 ಫೆಬ್ರುವರಿ 2021, 17:11 IST
Last Updated 10 ಫೆಬ್ರುವರಿ 2021, 17:11 IST
ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಮತ್ತು  ಪತ್ರಕರ್ತೆ ಪ್ರಿಯಾ ರಮಣಿ
ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಮತ್ತು ಪತ್ರಕರ್ತೆ ಪ್ರಿಯಾ ರಮಣಿ    

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಹೂಡಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ತೀರ್ಪು ಪ್ರಕಟಣೆಯನ್ನು ದೆಹಲಿ ಕೋರ್ಟ್‌ ಫೆಬ್ರುವರಿ 17ಕ್ಕೆ ಮುಂದೂಡಿದೆ.

2018ರಲ್ಲಿ ಅಕ್ಬರ್ ವಿರುದ್ಧ ರಮಣಿ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 2018ರ ಅಕ್ಟೋಬರ್‌ 15ರಂದು ರಮಣಿ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯನ್ನು ಅಕ್ಬರ್‌ ಹೂಡಿದ್ದರು. ಇಬ್ಬರೂ ಕಕ್ಷಿದಾರರ ಪರ-ವಿರೋಧ ವಾದಗಳನ್ನು ಆಲಿಸಿದ ಕೋರ್ಟ್ 2021ರ ಫೆಬ್ರುವರಿ 1ರಂದು ತೀರ್ಪು ಕಾಯ್ದಿರಿಸಿತ್ತು.

ಬುಧವಾರ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರ ಕುಮಾರ್ ಪಾಂಡೆ ಅವರು ತೀರ್ಪು ಪ್ರಕಟಣೆಯನ್ನು ಮುಂದೂಡಿದ್ದು, ಲಿಖಿತ ಸಲ್ಲಿಕೆಗಳನ್ನು ನಂತರ ಸಲ್ಲಿಸಲಾಗುತ್ತದೆ ಎಂದಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮಗಳ ಮೂಲಕ 2018ರಲ್ಲಿ #ಮೀಟೂ ಆಂದೋಲದ ರೂಪ ಪಡೆಯುತ್ತಿದ್ದಂತೆ ನಟಿಯರೂ ಸೇರಿದಂತೆ ಹಲವು ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ವಿಚಾರಗಳನ್ನು ತೆರೆದಿಟ್ಟರು. ಅಕ್ಬರ್‌ ಪತ್ರಕರ್ತರಾಗಿದ್ದ ಸಮಯದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರಿಯಾ ರಮಣಿ ಆರೋಪ ಮಾಡಿದ್ದರು.

ಮೀಟೂ ಅಭಿಯಾನದಲ್ಲಿ ಮಹಿಳೆಯರು ಹೊರಿಸಲಾದ ಎಲ್ಲ ಆರೋಪಗಳನ್ನು ಅಕ್ಬರ್‌ ತಳ್ಳಿ ಹಾಕಿದರು. ಕೇಂದ್ರ ಸಚಿವ ಸ್ಥಾನಕ್ಕೆ ಅವರು 2018ರ ಅಕ್ಟೋಬರ್‌ 17ರಂದು ರಾಜೀನಾಮೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.