ADVERTISEMENT

ಉಗ್ರರ ಅಡಗುದಾಣ ಪತ್ತೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಪಿಟಿಐ
Published 1 ಡಿಸೆಂಬರ್ 2019, 16:31 IST
Last Updated 1 ಡಿಸೆಂಬರ್ 2019, 16:31 IST
ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡು  –ಪಿಟಿಐ ಚಿತ್ರ
ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡು  –ಪಿಟಿಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರ ಅಡಗುದಾಣ ಭೇದಿಸಿದ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು, ಸ್ಯಾಟಲೈಟ್‌ ಫೋನ್‌ ಹಾಗೂ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ಉತ್ತರ ಕಾಶ್ಮೀರದ ಸಪೋರ್‌ ಪ್ರದೇಶದ ರಫಿಯಾಬಾದ್‌ ಬಳಿ ಈ ಅಡಗುದಾಣ ಪತ್ತೆಯಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಎರಡು ಎ.ಕೆ.ರೈಫಲ್‌ಗಳು, 2 ಸಾವಿರ ಮದ್ದುಗುಂಡುಗಳು, ಎರಡು ವಯರ್‌ಲೆಸ್‌ ಸೆಟ್‌ ಹಾಗೂ ಒಂದು ಸ್ಯಾಟಲೈಟ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ‘ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.