ADVERTISEMENT

ತೈಲ ಬೆಲೆ, ಕೊರೊನಾ ಸೋಂಕನ್ನು ಸರ್ಕಾರ ‘ಅನ್‌ಲಾಕ್’ ಮಾಡಿದೆ: ರಾಹುಲ್ ಗಾಂಧಿ

ಪಿಟಿಐ
Published 24 ಜೂನ್ 2020, 10:27 IST
Last Updated 24 ಜೂನ್ 2020, 10:27 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಕೊರೊನಾ ಸೋಂಕು ಏರುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರವು ‘ಪೆಟ್ರೋಲ್–ಡೀಸೆಲ್ ಬೆಲೆ ಹಾಗೂ ಕೋವಿಡ್ ಸಾಂಕ್ರಾಮಿಕ ರೋಗವನ್ನು ಅನ್‌ಲಾಕ್ ಮಾಡಿದೆ’ ಎಂದು ವಿಶ್ಲೇಷಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ಗ್ರಾಫ್ ಒಂದನ್ನು ಟ್ಯಾಗ್ ಮಾಡಿದ್ದಾರೆ. ‘ಕೊರೊನಾ ವೈರಸ್ ಮಾತ್ರ ಏರುಗತಿಯಲ್ಲಿಲ್ಲ’ ಎಂದು ಅದರಲ್ಲಿ ನಮೂದಿಸಿದ್ದಾರೆ. ಗ್ರಾಫ್‌ನಲ್ಲಿ ಕೊರೊನಾ ಸೋಂಕಿತರು ಹಾಗೂ ಪೆಟ್ರೋಲ್–ಡೀಸೆಲ್ ಏರಿಕೆಯನ್ನು ತೋರಿಸಲಾಗಿದೆ.

ಕಳೆದ 18 ದಿನಗಳಿಂದ ಸತತವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.