ADVERTISEMENT

ಕೋವಿಡ್ ಲಸಿಕಾ ಅಭಿಯಾನದ ಅಂಕಿ–ಅಂಶಗಳು ಗೊಂದಲ ಮೂಡಿಸುತ್ತಿವೆ: ಅಧೀರ್ ಚೌಧರಿ

ಪಿಟಿಐ
Published 23 ಅಕ್ಟೋಬರ್ 2021, 11:25 IST
Last Updated 23 ಅಕ್ಟೋಬರ್ 2021, 11:25 IST
   

ಕೋಲ್ಕತ್ತ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್‌ ಲಸಿಕಾ ಅಭಿಯಾನದ ಅಂಕಿ ಅಂಶಗಳಿಂದ ಜನರನ್ನು ಗೊಂದಲ ಮೂಡಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ಚೌಧರಿ ಶನಿವಾರ ಟೀಕಿಸಿದ್ದಾರೆ.

100 ಕೋಟಿ ಜನರಿಗೇ ಲಸಿಕೆ ನೀಡಲಾಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಧೀರ್‌ ಆರೋಪಿಸಿದರು.

‘100 ಕೋಟಿ ಡೋಸ್‌ ಲಸಿಕೆ ನೀಡಿದ್ದ ಸಂದರ್ಭದಲ್ಲಿ 100 ಸ್ಥಳಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಈ ಮೂಲಕ ಪ್ರಧಾನಿ 100 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ ಎಂಬ ಸಂದೇಶ ರವಾನಿಸಲು ಯತ್ನಿಸುತ್ತಿದ್ದಾರೆ. ಆದರೆ ಇದು ವಾಸ್ತವ ಸ್ಥಿತಿಯಲ್ಲ’ ಎಂದು ಫೇಸ್‌ಬುಕ್‌ನಲ್ಲಿ ವಿಡಿಯೊ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಭಾರತದ ಜನಸಂಖ್ಯೆ 139 ಕೋಟಿ. ಈ ಪೈಕಿ 106 ಕೋಟಿ ಜನರು ವಯಸ್ಕರು. ಈ ಪೈಕಿ 29 ಕೋಟಿ ಜನರು ಡಬಲ್‌ ಡೋಸ್ ಪಡೆದಿದ್ದಾರೆ. ಒಟ್ಟು ಸಾಧನೆ ಪ್ರಮಾಣ ಶೇ 21ರಷ್ಟು ಮಾತ್ರ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.