ADVERTISEMENT

ಉತ್ತರಾಖಂಡ: 35 ಪಿಎಸ್‌ಎ ಆಮ್ಲಜನಕ ಘಟಕಗಳನ್ನು ಉದ್ಘಾಟಿಸಿದ ಪ್ರಧಾನಿ

ಪಿಟಿಐ
Published 7 ಅಕ್ಟೋಬರ್ 2021, 8:57 IST
Last Updated 7 ಅಕ್ಟೋಬರ್ 2021, 8:57 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಹೃಷಿಕೇಶ (ಉತ್ತರಾಖಂಡ): ‘ಪಿಎಂ ಕೇರ್ಸ್‌ ನಿಧಿ‘ ಅಡಿ ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ 35 ಪಿಎಸ್‌ಎ ಆಮ್ಲಜನಕ ಘಟಕಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಇಲ್ಲಿನ ಏಮ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.

ದೇಶದಾದ್ಯಂತ 35 ಪಿಎಸ್‌ಎ ಆಮ್ಲಜನಕ ಘಟಕಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ದೇಶದ ಎಲ್ಲ ಜಿಲ್ಲೆಗಳಲ್ಲೂ ಆಮ್ಲಜನಕ ಘಟಕಗಳು ಆರಂಭವಾದಂತಾಗಿದೆ ಎಂದು ಪ್ರಧಾನಿ ಹೇಳಿದರು.

ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಹಾಜರಿದ್ದರು. ದೇಶದಾದ್ಯಂತ ಮೂಲಸೌಲಭ್ಯಕ್ಕೆ ಒತ್ತು ನೀಡುತ್ತಿರುವ ಮೋದಿಯವರ ಪ್ರಯತ್ನವನ್ನು ಸಚಿವದ್ವಯರು ಶ್ಲಾಘಿಸಿದರು.

ADVERTISEMENT

ಈವರೆಗೆ ದೇಶದಲ್ಲಿ ಒಟ್ಟು 1,224 ಪಿಎಸ್‌ಎ ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಪಿಎಂ ಕೇರ್ಸ್‌ ನಿಧಿ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದರಲ್ಲಿ 1,100ಕ್ಕೂ ಹೆಚ್ಚು ಘಟಕಗಳು ಪ್ರತಿ ದಿನ 1,750 ಮೆಟ್ರಿಕ್‌ ಟನ್‌ನಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.