ADVERTISEMENT

ಕೇರಳ: ಮಂಕಿಪಾಕ್ಸ್‌ ಶಂಕಿತ ರೋಗಿ ಸಾವು

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 13:57 IST
Last Updated 31 ಜುಲೈ 2022, 13:57 IST
ಮಂಕಿಪಾಕ್ಸ್‌ ವೈರಾಣು
ಮಂಕಿಪಾಕ್ಸ್‌ ವೈರಾಣು   

ತಿರುವನಂತಪುರ: ಕೇರಳದ ತ್ರಿಶ್ಯೂರ್‌ ಜಿಲ್ಲೆಯಲ್ಲಿ ಮಂಕಿಪಾಕ್ಸ್‌ನ ಶಂಕಿತ ರೋಗಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.

ತ್ರಿಶ್ಯೂರ್‌ ಜಿಲ್ಲೆಯ ಚಾವಕ್ಕಾಡ್‌ನ 22 ವರ್ಷದ ಯುವಕರೊಬ್ಬರಿಗೆ ಸಂಯುಕ್ತ ಅರಬ್‌ ಸಂಸ್ಥಾನದಲ್ಲಿರುವಾಗ (ಯುಎಇ) ಸೋಂಕು ತಗುಲಿತ್ತು. ಈ ವಿಷಯವನ್ನು ಮುಚ್ಚಿಟ್ಟು ಅವರು ಊರಿಗೆ ಮರಳಿದ್ದರು ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಭಾನುವಾರ ತಿಳಿಸಿದ್ದಾರೆ

ಜುಲೈ 21ರಂದು ಊರಿಗೆ ತಲುಪಿದ್ದ ಯುವಕನನ್ನು ಜುಲೈ 27ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಂಕಿಪಾಕ್ಸ್ ಪತ್ತೆಯಾಗಿ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿತ್ತು. ಪರೀಕ್ಷೆಯ ವರದಿಯು ಇನ್ನೂ ಬಂದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.