ADVERTISEMENT

ಸಂಭ್ರಮ ತಂದ ಮುಂಗಾರು ಪ್ರವೇಶ

ವಾಡಿಕೆಗಿಂತ ವಾರ ತಡವಾಗಿ ಮಳೆ ಋತು ಆರಂಭ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 19:17 IST
Last Updated 8 ಜೂನ್ 2019, 19:17 IST
   

ನವದೆಹಲಿ (ಪಿಟಿಐ): ಹವಾಮಾನ ಇಲಾಖೆಯ ಅಂದಾಜಿನಂತೆಯೇ ಮುಂಗಾರು ಮಾರುತವು ಕೇರಳ ಕರಾವಳಿಗೆ ಶನಿವಾರ ಪ್ರವೇಶಿಸಿದೆ.

ಇದರೊಂದಿಗೆ ದೇಶದಲ್ಲಿ ನಾಲ್ಕು ತಿಂಗಳ ಮಳೆಗಾಲ ಆರಂಭವಾಗಿದೆ. ಕೇರಳದ ಹಲವು ಭಾಗಗಳಲ್ಲಿ ಮುಂಗಾರು ಋತುವಿನ ಮೊದಲ ದಿನವೇ ಚೆನ್ನಾಗಿ ಮಳೆಯಾಗಿದೆ.ದೇಶದಲ್ಲಿನ ಕೃಷಿ ಸಂಕಷ್ಟ ಮತ್ತು ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿನ ಜಲಾಶಯಗಳು ಬರಿದಾಗಿರುವ ಈ ಸಂದರ್ಭದಲ್ಲಿ ಮಳೆ ಆರಂಭವಾಗಿರುವುದು ಸಂಭ್ರಮ ಮೂಡಿಸಿದೆ.

ಮೂರು ದಿನ ಬಳಿಕ ರಾಜ್ಯಕ್ಕೆ

ADVERTISEMENT

ಬೆಂಗಳೂರು: ಕೇರಳ ಪ್ರವೇಶಿಸಿರುವ ಮುಂಗಾರು ಮಳೆ ಇದೇ 11 ಅಥವಾ 12ರಂದು ರಾಜ್ಯವನ್ನು ತಲುಪುವ ಸಾಧ್ಯತೆ ಇದೆ.

ಕೇರಳಕ್ಕೆ ಬಂದಿರುವ ಮಾರುತಗಳನ್ನು ಗಮನಿಸಿದರೆಮುಂಗಾರು ನಿರೀಕ್ಷೆಯಷ್ಟು ಬಲಿಷ್ಠವಾಗಿಲ್ಲ.ದುರ್ಬಲವಾಗಿರುವ ಕಾರಣ ಕೇರಳದಿಂದ ರಾಜ್ಯಕ್ಕೆ ತಲುಪಲು ಕನಿಷ್ಠ ಮೂರು ದಿನ ಬೇಕಾಗಬಹುದು ಎಂದುರಾಜ್ಯ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು.

ಇದರ ನಡುವೆ‌ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದೆ. ಅದು ಸದ್ಯಕ್ಕೆ ಅಷ್ಟೇನು ಬಲಿಷ್ಠವಾಗಿಲ್ಲ. ಒಂದು ವೇಳೆ ಬಲಿಷ್ಠಗೊಂಡರೂ ರಾಜ್ಯಕ್ಕೆ ಪ್ರಯೋಜನ ಆಗುವಂತೆ ಕಾಣಿಸುತ್ತಿಲ್ಲ. ಉತ್ತರ ಭಾರತದ ಕಡೆಗೆ ಮುಖ ಮಾಡಿದ್ದು, ಬಲಿಷ್ಠಗೊಂಡರೆ ರಾಜ್ಯದ ಕಡೆ ಇರುವ ಮೋಡಗಳನ್ನೂ ಸೆಳೆದುಕೊಂಡು ಮುಂಬೈ ಸುತ್ತಮುತ್ತ ಮಳೆ ಸುರಿಸುವ ಸಾಧ್ಯತೆ ಇದೆ. ವಾಯು
ಭಾರ ಸದ್ಯದ ಸ್ಥಿತಿಯಲ್ಲೇ ಇದ್ದರೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.