ADVERTISEMENT

ಸಂಸದರು ವೇದಾಂತ ಅಧ್ಯಯಿಸಬೇಕು: ಉಪ ರಾಷ್ಟ್ರಪತಿ ಧನಕರ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 15:09 IST
Last Updated 3 ಜನವರಿ 2025, 15:09 IST
ಜಗದೀಪ್‌ ಧನಕರ್‌
ಜಗದೀಪ್‌ ಧನಕರ್‌   

ನವದೆಹಲಿ: ಹಿರಿಯರ ಮನೆ ಎಂದೇ ಕರೆಯುವ ರಾಜ್ಯಸಭೆಯಲ್ಲಿ ಸಂಸದರು ಎಂದಿಗೂ ಸಂವಾದ ನಡೆಸುವುದಿಲ್ಲ ಎಂದು ಶುಕ್ರವಾರ ಬೇಸರ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು, ಸಂಸದರು ವೇದಾಂತವನ್ನು ಅಧ್ಯಯಿಸಿದರೆ ಪರಿಣಾಮಕಾರಿಯಾಗಿ ಚರ್ಚೆಗಳಲ್ಲಿ ಭಾಗವಹಿಸಬಹುದು ಎಂದರು.

ಆದರೆ, ಸನಾತನ ಧರ್ಮ ಮತ್ತು ಹಿಂದೂಗಳ ಬಗ್ಗೆ ತಪ್ಪು ತಿಳಿದಿರುವ ಕೆಲವರು ದಿಗ್ಭ್ರಮೆಗೊಳಿಸುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಅವರು ವಿಷಾದಿಸಿದರು.

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಆಯೋಜಿಸಲಾಗಿದ್ದ ವೇದಾಂತ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

ವೇದಾಂತವು ಸಂವಾದವನ್ನು ಉತ್ತೇಜಿಸುತ್ತದೆ. ಅಲ್ಲದೆ ವಿಭಿನ್ನ ದೃಷ್ಟಿಕೋನಗಳ ಜನರು ಹೇಗೆ ಸಹಬಾಳ್ವೆ ನಡೆಸಬಹುದು ಎಂಬುದನ್ನೂ ಅದು ತೋರಿಸುತ್ತದೆ ಎಂದು ರಾಜ್ಯಸಭಾ ಸಭಾಪತಿಯೂ ಆಗಿರುವ ಅವರು ಹೇಳಿದರು.

‘ಸಂಸದರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾದರೆ, ಜನರು ಅವರನ್ನು ಪ್ರಶ್ನಿಸುವ ಮೂಲಕ ಒತ್ತಡ ಹೇರಬೇಕು. ವೈದ್ಯರು, ವಕೀಲರು ಅಥವಾ ಇತರ ಸಾರ್ವಜನಿಕ ಸೇವಕರು ಕರ್ತವ್ಯ ನಿರ್ವಹಿಸದಿದ್ದಾಗ ಹೇಗೆ ಪ್ರಶ್ನಿಸಲಾಗುತ್ತದೆಯೋ ಹಾಗೇ ಇವರನ್ನೂ ಕೇಳಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.