ADVERTISEMENT

ಸಂಗೀತ ಕಲಾನಿಧಿ ಪ್ರಶಸ್ತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 13:44 IST
Last Updated 22 ಮೇ 2022, 13:44 IST

ಚೆನ್ನೈ:ಸಂಗೀತ ಅಕಾಡೆಮಿಯು 2020-22ನೇ ಸಾಲಿನಲ್ಲಿ ಪ್ರತಿಷ್ಠಿತ ‘ಸಂಗೀತ ಕಲಾನಿಧಿ’ ಸೇರಿದಂತೆ ಇತರ ಪ್ರಶಸ್ತಿಗಳಿಗೆ ಭಾಜನರಾದ ಕಲಾವಿದರ ಹೆಸರನ್ನು ಭಾನುವಾರ ಪ್ರಕಟಿಸಿದೆ.

ಖ್ಯಾತ ಗಾಯಕ ನೈವೇಲಿ ಆರ್‌.ಸಂತಾನಗೋಪಾಲನ್‌ (2020), ಪ್ರಖ್ಯಾತ ಮೃದಂಗ ಕಲಾವಿದ ತಿರುವಾರೂರ್ ಭಕ್ತವತ್ಸಲಂ (2021) ಹಾಗೂ ವಯಲಿನ್‌ ವಾದಕ ಜೋಡಿ ಲಾಲ್‌ಗುಡಿ ಜಿಟಿಆರ್‌ ಕೃಷ್ಣನ್‌ ಮತ್ತು ವಿಜಯಲಕ್ಷ್ಮೀ (2022) ಅವರು ಪ್ರತಿಷ್ಠಿತ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹಾಗೆಯೇ, ನಾಗಸ್ವರಂ ಪ್ರತಿಪಾದಕ ಕೀಳ್‌ವಲೂರು ಎನ್‌.ಜಿ.ಗಣೇಶನ್‌ (2020), ಸಂಗೀತಗಾರ್ತಿಡಾ.ರಿತಾ ರಾಜನ್‌(2021) ಮತ್ತು ವೀಣಾ ವಾದಕಿ ಹಾಗೂ ಗಾಯಕಿ ಡಾ.ಆರ್‌.ಎಸ್‌ ಜಯಲಕ್ಷ್ಮೀ (2022) ಅವರಿಗೆ ‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿ ನೀಡುವುದಾಗಿ ಅಕಾಡೆಮಿ ಘೋಷಿಸಿದೆ.

ADVERTISEMENT

ಖ್ಯಾತ ಗಾಯಕ ತಾಮರಕ್ಕಾಡ್ ಗೋವಿಂದನ್ ನಂಬೂದರಿ (2020), ಖ್ಯಾತ ಲಯ ವಾದ್ಯಕಾರ ನೇಮಣಿ ಸೋಮಯಾಜುಲು (2021) ಮತ್ತು ಖಂಜಿರಾ ಕಲಾವಿದ ಎ.ವಿ.ಆನಂದ್‌ (2022) ಅವರು ಟಿ.ಟಿ.ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದೆ.

ಡಾ.ವಿ.ಪ್ರೇಮಲತಾ ಅವರಿಗೆ ‘ಸಂಗೀತಗಾರ್ತಿ’ ಪ್ರಶಸ್ತಿ (2020), ಭರತನಾಟ್ಯ ಕಲಾವಿದೆ ರಮಾ ವೈದ್ಯನಾಥನ್‌ (2020) ಮತ್ತು ನೃತ್ಯ ನಟರಾಜ (2021) ಅವರಿಗೆ ‘ನೃತ್ಯ ಕಲಾನಿಧಿ’ ಪ್ರಶಸ್ತಿ ನೀಡಲಾಗುತ್ತಿದೆ. 2022ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಬ್ರಾಘ ಬೆಸ್ಸೆಲ್‌ ಅವರು ಭಾಜನರಾಗಿದ್ದಾರೆ ಎಂದು ಅಕಾಡೆಮಿಘೋಷಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು2022ರ ಡಿ.15 ರಂದು ನಡೆಯಲಿರುವ 96ನೇ ವಾರ್ಷಿಕ ಸಂಗೀತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಪ್ರಸಕ್ತ ವರ್ಷದ ವಾರ್ಷಿಕ ಸಂಗೀತ ಸಮಾರಂಭವನ್ನು ಭೌತಿಕವಾಗಿ ಆಚರಿಸಲು ಯೋಚಿಸುತ್ತಿರುವುದಾಗಿ ಅಕಾಡೆಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೊನಾ ಕಾರಣದಿಂದ 2020 ಮತ್ತು 2021ರಲ್ಲಿ ಆನ್‌ಲೈನ್ ಮೂಲಕ ಕಾರ್ಯಕ್ರಮ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.