ADVERTISEMENT

ನಾಗಾಲ್ಯಾಂಡ್‌: ಅಮೂಲ್ಯ ಖನಿಜಗಳ ಬಗ್ಗೆ ತನಿಖೆ ನಡೆಸಲು ಸೂಚನೆ

ಪಿಟಿಐ
Published 27 ನವೆಂಬರ್ 2020, 9:37 IST
Last Updated 27 ನವೆಂಬರ್ 2020, 9:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಹಿಮಾ: ನಾಗಾಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ವಿವಿಧ ರೀತಿಯ ಅಮೂಲ್ಯ ಖನಿಜಗಳು ದೊರಕಿವೆ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಆಧಾರದ ಮೇರೆಗೆ ಈ ಬಗ್ಗೆ ತನಿಖೆ ನಡೆಸುವಂತೆ ಭೂವಿಜ್ಞಾನಿಗಳಿಗೆ ಅಲ್ಲಿನ ಸರ್ಕಾರ ಸೂಚಿಸಿದೆ.

ಈ ಬಗ್ಗೆ ನಾಗಾಲ್ಯಾಂಡ್‌ನ ಭೂವಿಜ್ಞಾನ ಮತ್ತು ಗಣಿಗಾರಿಕೆಯ ನಿರ್ದೇಶಕ ಎಸ್.ಮಾನೆನ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಭೂವಿಜ್ಞಾನಿಗಳಾದ ಅಬೆಂಥುಂಗ್ ಲೋಥಾ, ಲಾಂಗ್ರಿಕಾಬಾ, ಕೆನ್ಯೆಲೊ ರೆಂಗ್ಮಾ ಮತ್ತು ಡೇವಿಡ್ ಲುಪೆನಿ ಅವರಿಗೆ ಅಮೂಲ್ಯ ಖನಿಜಗಳ ಬಗ್ಗೆ ತನಿಖೆ ನಡೆಸಿ, ಆದಷ್ಟು ಬೇಗ ವರದಿ ಸಲ್ಲಿಸುವಂತೆ ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ವಾಚಿಂಗ್ ಪ್ರದೇಶದಲ್ಲಿ ವಜ್ರಗಳ ಸಿಕ್ಕಿವೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಇದರ ಫೋಟೊಗಳು ಮತ್ತು ಗ್ರಾಮಸ್ಥರು ವಜ್ರಗಳಿಗಾಗಿ ಭೂಮಿ ಅಗೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.