ADVERTISEMENT

ನಾಗಾಲ್ಯಾಂಡ್ ಸಿಎಂ ಮಗಳ ಮದುವೆಯಲ್ಲಿ ಕುಣಿದ ಸಚಿವ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 14:36 IST
Last Updated 15 ನವೆಂಬರ್ 2022, 14:36 IST

ಕಠ್ಮಂಡ್‌:ನಾಗಾಲ್ಯಾಂಡ್ ರಾಜ್ಯದಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರುಮುಖ್ಯಮಂತ್ರಿ ನೆಫಿಯು ರಿಯೊ ಅವರ ಪುತ್ರಿಯ ಮದುವೆಯಲ್ಲಿ ಮಸ್ತ್‌ ಡ್ಯಾನ್ಸ್‌ ಮಾಡಿದ್ದಾರೆ.

ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಭರ್ಜರಿ ಡ್ಯಾನ್ಸ್‌ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಘಿ ಹರಿದಾಡುತ್ತಿದೆ.

ಹಾಸ್ಯ ಪ್ರಜ್ಞೆಯಿಂದಲೇ ನೆಟಿಜನ್‌ಗಳಿಗೆ ಸಚಿವರು ಚಿರಪರಿಚಿತರಾಗಿದ್ದಾರೆ.ತೆಮ್ಜೆನ್ ಇಮ್ನಾ ಅಲೋಂಗ್ ಅವರ ಡ್ಯಾನ್ಸ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಡ್ಯಾನ್ಸ್‌ ವಿಡಿಯೊವನ್ನು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಮುಖ್ಯಮಂತ್ರಿ ನೆಫಿಯು ರಿಯೊ ಅವರ ಮಗಳ ವಿವಾಹ ಸಮಾರಂಭದಲ್ಲಿಅತಿಥಿಗಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಅವರ ಕುರ್ತಾ ಪೈಜಾಮ ಮತ್ತು ಸದ್ರಿ ಧರಿಸಿರುವುದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.