ADVERTISEMENT

ಹಿಮಾಲಯದಲ್ಲಿ ನಾಲ್ವರು ಚಾರಣಿಗರ ರಕ್ಷಣೆ, ಕಾಣೆಯಾದ 8 ಮಂದಿಗೆ ಶೋಧ

ಏಜೆನ್ಸೀಸ್
Published 2 ಜೂನ್ 2019, 11:10 IST
Last Updated 2 ಜೂನ್ 2019, 11:10 IST
   

ಫಿಥೋರ್‌ಗರ್‌(ಉತ್ತರಾಖಂಡ):ಹಿಮಾಲಯದ ನಂದಾ ದೇವಿಪರ್ವತದ ಚಾರಣ ವೇಳೆ ಪ್ರತೀಕೂಲ ಹವಾಮಾನದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ನಾಲ್ವರು ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ. ಉಳಿದ 8 ಜನರಿಗಾಗಿಶೋಧ ಕೈಗೊಳ್ಳಲಾಗಿದೆ.

ಮೇ 13ರಂದು ಚಾರಣಕ್ಕೆ ತೆರಳಿದ್ದ ಎಂಟು ಮಂದಿ ಶುಕ್ರವಾರ ಕಾಣೆಯಾಗಿದ್ದರು. ಅವರಿಗಾಗಿ ಇಂಡೋ–ಟಿಬೆಟಿಯನ್‌ ಗಡಿ ಪೊಲೀಸರು ಹುಡುಕಾಟ ನಡೆಸಿದ್ದರು.

ಪ್ರತೀಕೂಲ ಹವಾಮಾನದಿಂದಾಗಿ ಚಾರಣ ವೇಳೆ ಕಾಣೆಯಾಗಿದ್ದವರ ಪೈಕಿ ನಾಲ್ವರನ್ನು ರಕ್ಷಿಸಲಾಗಿದೆ. ಉಳಿದ ಎಂದು ಜನರಿಗಾಗಿ ಶೋಧ ನಡೆಸಲಿದ್ದೇವೆ. ಹವಾಮಾನ ಪರಿಸ್ಥಿತಿ ನೋಡಿಕೊಂಡು ಮುಂದಿನ ಎರಡು ದಿನಗಳಲ್ಲಿ ಹುಡುಕಾಟ ನಡೆಸಲಿದ್ದೇವೆ ಎಂದು ಪಿಥೋರ್‌ಗರ್‌ನ ಡಿಎಂ ವಿ.ಕೆ.ಜೋಗ್ದಾಂಡೆ ಅವರು ತಿಳಿಸಿದ್ದಾರೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ADVERTISEMENT

ಪರ್ವತಾರೋಹಿಗಳು ಚಾರಣ ವೇಳೆ ಬೇಸ್‌ ಕ್ಯಾಂಪ್‌ಗೆ ಹಿಂದಿರುಗದೇ ಇದ್ದಾಗ ಅವರಿಗಾಗಿ ಹುಡುಕಾಟ ಆರಂಭಿಸಲಾಗಿದೆ.ವಿಪರೀತ ಮಳೆ ಹಾಗೂ ಹಿಮಪಾತದಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.

ನಂದಾ ದೇವಿ ಭಾರತದ ಎರಡನೇ ಅತ್ಯಂತ ಎತ್ತರದ ಹಿಮಾಲಯ ಪರ್ವತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.