ADVERTISEMENT

ನ್ಯಾನೊ ಲಿಕ್ವಿಡ್ ಡಿಎಪಿ ರಸಗೊಬ್ಬರ ಬಿಡುಗಡೆಗೆ ಅನುಮತಿ ನೀಡಿದ ಸರ್ಕಾರ

ಪಿಟಿಐ
Published 5 ಮಾರ್ಚ್ 2023, 14:17 IST
Last Updated 5 ಮಾರ್ಚ್ 2023, 14:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ನ್ಯಾನೊ ಲಿಕ್ವಿಡ್ ಡಿಎಪಿ (ಡಿ-ಅಮೋನಿಯಂ ಫಾಸ್ಫೇಟ್) ರಸಗೊಬ್ಬರ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದು ರೈತರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್‌ಸುಖ್‌ ಮಾಂಡವಿಯಾ ಅವರ ಟ್ವೀಟ್‌ಗೆ ಉತ್ತರಿಸಿದ ಅವರು, ರಸಗೊಬ್ಬರಗಳಲ್ಲಿ ಸ್ವಾವಲಂಬನೆಯತ್ತ ಸಾಗಲು ಇದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.

2021ರಲ್ಲಿ ನ್ಯಾನೊ ಲಿಕ್ವಿಡ್ ಯೂರಿಯಾವನ್ನು ಪರಿಚಯಿಸಿದ ರಸಗೊಬ್ಬರ ಸಹಕಾರಿ ಸಂಸ್ಥೆ ‘ಇಫ್ಕೊ’, ಶುಕ್ರವಾರ ತನ್ನ ನ್ಯಾನೊ ಡಿಎಪಿ ರಸಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ಕಾರ ಅನುಮೋದಿಸಿದೆ ಎಂದು ಘೋಷಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.