ADVERTISEMENT

ಜನವರಿ ಅಂತ್ಯದೊಳಗೆ ಎಲ್ಲ ಮನೆಗೂ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 17:31 IST
Last Updated 20 ಜನವರಿ 2019, 17:31 IST
electrification
electrification   

ನವದೆಹಲಿ: ಇದೇ ತಿಂಗಳ ಅಂತ್ಯಕ್ಕೆ ಭಾರತವು ಶೇ 100ರಷ್ಟು ವಿದ್ಯುದೀಕರಣ ಗುರಿಯನ್ನು ಪೂರ್ಣಗೊಳಿಸಲಿದೆ. ಸೌಭಾಗ್ಯ ಯೋಜನೆಯಡಿ ₹16,320 ಕೋಟಿ ವೆಚ್ಚದಲ್ಲಿ 2.44 ಕೋಟಿ ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆದಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

2017ರ ಸೆಪ್ಟೆಂಬರ್‌ನಲ್ಲಿ ‘ಪ್ರಧಾನಮಂತ್ರಿ ಸಹಜ ಬಿಜ್ಲಿ ಹರ್ ಘರ್ ಯೋಜನೆ’ಗೆ (ಸೌಭಾಗ್ಯ) ಚಾಲನೆ ನೀಡಲಾಗಿತ್ತು. ಇದರಡಿ 2.48 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿತ್ತು.

ಕೆಲವು ರಾಜ್ಯಗಳಲ್ಲಿ ಚುನಾವಣೆ ಹಾಗೂ ನಕ್ಸಲರ ಅಡ್ಡಿಯಿಂದ ಕಾಮಗಾರಿ ವಿಳಂಬವಾಗಿತ್ತು. ಎಲ್ಲ ನಗರ ಹಾಗೂ ಗ್ರಾಮಗಳ ಕೊನೆಯ ಮನೆಗೂ ವಿದ್ಯುತ್ ಸಂಪರ್ಕ ನೀಡುವುದು ಯೋಜನೆಯ ಉದ್ದೇಶವಾಗಿದೆ.

ADVERTISEMENT

***

* 30 ಸಾವಿರ ಮನೆಗೆ ನಿತ್ಯ ವಿದ್ಯುತ್ ಸಂಪರ್ಕ ನೀಡುವ ಗುರಿ

* ಯೋಜನೆ ಪೂರ್ಣಗೊಳಿಸಲು 31 ಮಾರ್ಚ್ 2019ವರೆಗೆಗಡುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.