ADVERTISEMENT

ಅಸ್ಸಾಂ: 1700 ಕೆ.ಜಿ ದನದ ಮಾಂಸ ಜಪ್ತಿ, 200 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 23:04 IST
Last Updated 2 ಜುಲೈ 2025, 23:04 IST
-
-   

ಗುವಾಹಟಿ: ದನದ ಮಾಂಸ ಮಾರಾಟ ಮತ್ತು ಸಾಗಣೆ ವಿರುದ್ಧ ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಿರುವ ಅಸ್ಸಾಂ ಸರ್ಕಾರ, ಈ ವರೆಗೆ 200 ಜನರನ್ನು ಬಂಧಿಸಿದ್ದು 1,700 ಕೆ.ಜಿಗೂ ಅಧಿಕ ಶಂಕಾಸ್ಪದ ದನದ ಮಾಂಸವನ್ನು ಜಪ್ತಿ ಮಾಡಿದೆ.

ರಾಜ್ಯದ ಕೆಲ ದೇವಸ್ಥಾನಗಳ ಸಮೀಪ ಶಂಕಿತ ದನದ ಮಾಂಸ ವಶಪಡಿಸಿಕೊಂಡ ನಂತರ, ಕೋಮು ಸಂಘರ್ಷ ಕಂಡುಬಂದಿತ್ತು. ಇದರ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

‘ಅಕ್ರಮ ಕಸಾಯಿಖಾನೆಗಳು ಹಾಗೂ ಜಾನುವಾರುಗಳ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ದನದ ಮಾಂಸ ಮಾರಾಟ ಮಾಡುವುದರ ವಿರುದ್ಧ ರಾಜ್ಯದಾದ್ಯಂತ ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಕನಿಷ್ಠ 178 ಆಹಾರ ಮಳಿಗೆಗಳು ಮತ್ತು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಸಂಶಯಾಸ್ಪದ ದನದ ಮಾಂಸವನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.