ADVERTISEMENT

ಸೆ.1ರಿಂದ ನೀಟ್‌–ಪಿಜಿ ಕೌನ್ಸೆಲಿಂಗ್‌

ಪಿಟಿಐ
Published 24 ಜುಲೈ 2022, 12:04 IST
Last Updated 24 ಜುಲೈ 2022, 12:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌–ಪಿಜಿ ಕೌನ್ಸೆಲಿಂಗ್ ಸೆಪ್ಟೆಂಬರ್‌ 1ರಿಂದ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ನೀಟ್–ಪಿಜಿ 2022ನೇ ಸಾಲಿನ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು ಕೌನ್ಸೆಲಿಂಗ್ ಸಮಯದಲ್ಲಿ ತಮ್ಮ ಆಯ್ಕೆಯ ಕೋರ್ಸ್‌ ಮತ್ತು ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ನೀಟ್‌–ಪಿಜಿ ಪರೀಕ್ಷೆಯು ಜನವರಿಯಲ್ಲಿ ನಡೆದು, ಮಾರ್ಚ್‌ನಲ್ಲಿ ಕೌನ್ಸೆಲಿಂಗ್‌ ಆರಂಭವಾಗುತ್ತದೆ. ಆದರೆ ಕೋವಿಡ್‌ ಕಾರಣದಿಂದ ಕಳೆದ ವರ್ಷದ ಪ್ರವೇಶ ಪ್ರಕ್ರಿಯೆ ವಿಳಂಬವಾಗಿದ್ದುದರಿಂದ ಈ ವರ್ಷ ಮೇ 21ರಂದು ಪರೀಕ್ಷೆ ನಡೆಸಿ, ಜೂನ್‌ 1ರಂದು ಫಲಿತಾಂಶ ಪ್ರಕಟಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.