ADVERTISEMENT

ಲೆತಪೋರಾ ದಾಳಿ: ಐದನೇ ಆರೋಪಿ ಬಂಧನ

ಪಿಟಿಐ
Published 14 ಏಪ್ರಿಲ್ 2019, 16:51 IST
Last Updated 14 ಏಪ್ರಿಲ್ 2019, 16:51 IST
   

ನವದೆಹಲಿ: ಜಮ್ಮು–ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆತಪೋರಾ ಗ್ರಾಮದ ಬಳಿ 2017ರಲ್ಲಿ ಸಿಆರ್‌ಪಿಎಫ್‌ ಶಿಬಿರದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ.

ಪುಲ್ವಾಮಾದ ಇರ್ಷಾದ್‌ ಅಹ್ಮದ್‌ ರೆಶಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ತನಿಖಾ ಸಂಸ್ಥೆಯು ಬಂಧಿಸಿರುವನಿಸಾರ್ ಅಹ್ಮದ್ ತಂತ್ರೇ ಮತ್ತು ಸೈಯದ್ ಹಿಲಾಲ್ ಆಂದ್ರಬಿ ಎಂಬ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ದಾಳಿಯಲ್ಲಿ ರೆಶಿ ಪಾಲ್ಗೊಂಡಿರುವ ಬಗ್ಗೆ ಗೊತ್ತಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಜತೆಗೆ ರೆಶಿ ಕೆಲಸ ಮಾಡುತ್ತಿದ್ದ, ಉಗ್ರ ನೂರ್‌ ಮೊಹಮ್ಮದ್‌ ತಂತ್ರೇ ಅಲಿಯಾಸ್‌ ನೂರ್‌ ತ್ರಾಲಿಯ ಸಹಚರ ಎಂದು ಹೇಳಲಾಗಿದೆ. 2017ರಲ್ಲಿ ನೂರ್‌ನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಸಿಆರ್‌ಪಿಎಫ್‌ ಶಿಬಿರದ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು ಎಂದು ಎನ್‌ಐಎ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.