ADVERTISEMENT

ಸುಂಜ್ವಾನ್‌ ದಾಳಿ ಪ್ರಕರಣ: ಪ್ರಮುಖ ಆರೋಪಿ ಬಂಧನ

ಪಿಟಿಐ
Published 26 ಮೇ 2022, 13:29 IST
Last Updated 26 ಮೇ 2022, 13:29 IST
–ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜಮ್ಮು ಹೊರವಲಯದ ಸುಂಜ್ವಾನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಎಂದು ಶಂಕಿಸಲಾದ ಅಬಿದ್‌ ಅಹಮ್ಮದ್‌ ಮೀರ್‌ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಬಂಧಿಸಿದೆ.

ಪುಲ್ವಾಮಾ ನಿವಾಸಿ ಅಬಿದ್‌, ಜೈಶ್‌–ಎ–ಮೊಹಮ್ಮದ್‌(ಜೆಇಎಂ) ಉಗ್ರ ಸಂಘಟನೆಯ ನಂಟು ಹೊಂದಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿಸಿದ್ದ ಬಿಲಾಲ್‌ ಅಹಮ್ಮದ್‌ ವಾಗೆಯ ಸಹಚರ ಎಂದು ಎನ್‌ಐಎ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಪಾಕಿಸ್ತಾನದಲ್ಲಿರುವ ಜೆಇಎಂ ಉಗ್ರರ ಜೊತೆಗೂ ಈತನಿಗೆ ನಂಟಿದೆ ಎಂದಿದ್ದಾರೆ.

ಏಪ್ರಿಲ್‌ 22ರಂದು ಅರೆಸೇನಾ ಪಡೆಯನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಜೆಇಎಂನ ಇಬ್ಬರು ಆತ್ಮಾಹುತಿ ದಾಳಿಕೋರರು ನಡೆಸಿದ ದಾಳಿಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಎಎಸ್‌ಐಯೊಬ್ಬರು ಹುತಾತ್ಮರಾಗಿದ್ದರು. ಇಬ್ಬರು ದಾಳಿಕೋರರು ಕೂಡ ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.