ADVERTISEMENT

ವಾಜೆ ಬಂಧನ ಅವಧಿ: ಏ.7ರವರೆಗೆ ವಿಸ್ತರಣೆ

ಪಿಟಿಐ
Published 3 ಏಪ್ರಿಲ್ 2021, 12:25 IST
Last Updated 3 ಏಪ್ರಿಲ್ 2021, 12:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬಂಧಿತ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಎನ್‌ಐಎ ವಶಕ್ಕೆ ಒಪ್ಪಿಸಿದ್ದ ಅವಧಿಯನ್ನು ವಿಶೇಷ ಎನ್‌ಐಎ ಕೋರ್ಟ್‌ ಏಪ್ರಿಲ್‌ 7ರವರೆಗೂ ವಿಸ್ತರಿಸಿದೆ. ಆರು ದಿನಗಳು ವಾಜೆ ಅವರನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದುತನಿಖಾ ಸಂಸ್ಥೆಯು ಕೋರ್ಟ್‌ಗೆ ಕೇಳಿತ್ತು.

ಉದ್ಯಮಿ ಮುಖೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಹಾಗೂ ಉದ್ಯಮಿ ಮನ್‌ಸುಖ್‌ ಹಿರೇನ್‌ ಶಂಕಾಸ್ಪದ ಸಾವಿನ ಪ್ರಕರಣದ ಸಂಬಂಧ ವಾಜೆ ಅವರನ್ನು ಎನ್‌ಐಎ ಬಂಧಿಸಿದೆ. ಈ ಮೊದಲು ಅವರನ್ನು ಮಾರ್ಚ್‌ 13ರಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT