ADVERTISEMENT

ರೈಲು ಡಿಕ್ಕಿ: 90 ಕುರಿಗಳ ಸಾವು, ಮಾಂಸ ತಿನ್ನಲು ಬಂದ ರಣಹದ್ದುಗಳೂ ಬಲಿ

ಐಎಎನ್ಎಸ್
Published 26 ಡಿಸೆಂಬರ್ 2022, 4:56 IST
Last Updated 26 ಡಿಸೆಂಬರ್ 2022, 4:56 IST
   

ಲಖನೌ: ರೈಲು ಡಿಕ್ಕಿ ಹೊಡೆದ ಪರಿಣಾಮ 90 ಕುರಿಗಳು ಮತ್ತು 8 ರಣಹದ್ದುಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲರಾಮಪುರದಲ್ಲಿ ನಡೆದಿದೆ.

ಪಂಚ ಪರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಸರಯು ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ.

ನಾಯಿಗಳು ಕುರಿಗಳ ಹಿಂಡನ್ನು ಅಟ್ಟಾಡಿಸಿಕೊಂಡು ಬಂದಿದ್ದರಿಂದ ಗಾಬರಿಗೊಂಡ ಕುರಿಗಳು ರೈಲ್ವೆ ಹಳಿ ಮೇಲೆ ಬಂದಿವೆ. ಈ ಸಂದರ್ಭ ಆ ಮಾರ್ಗದಲ್ಲಿ ಬಂದ ರೈಲೊಂದು ಡಿಕ್ಕಿ ಹೊಡೆದು ಕುರಿಗಳು ಸಾವಿಗೀಡಾಗಿವೆ ಎಂದು ವರದಿ ತಿಳಿಸಿದೆ.

ADVERTISEMENT

ಇದಾದ ಸ್ವಲ್ಪ ಸಮಯದ ಬಳಿಕ ಸತ್ತ ಕುರಿಗಳ ಮಾಂಸ ತಿನ್ನಲು ಬಂದಿದ್ದ ರಣಹದ್ದುಗಳಿಗೆ ಮತ್ತೊಂದು ರೈಲು ಡಿಕ್ಕಿಹೊಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.