ADVERTISEMENT

ತಿಹಾರ್ ಜೈಲಿನಲ್ಲಿ ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ

ಶೆಮಿಜ್‌ ಜಾಯ್‌
Published 20 ಮಾರ್ಚ್ 2020, 1:54 IST
Last Updated 20 ಮಾರ್ಚ್ 2020, 1:54 IST
ತಿಹಾರ್ ಜೈಲಿನ ಮುಂಭಾಗದಲ್ಲಿ ಭದ್ರತಾ ವ್ಯವಸ್ಥೆ
ತಿಹಾರ್ ಜೈಲಿನ ಮುಂಭಾಗದಲ್ಲಿ ಭದ್ರತಾ ವ್ಯವಸ್ಥೆ   

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಶುಕ್ರವಾರ ಬೆಳಗ್ಗೆ 5.30ಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿ ಮರಣ ದಂಡನೆ ನೀಡಲಾಗಿದೆ. ನ್ಯಾಯಾಲಯ ಜಾರಿ ಮಾಡಿರುವ ಡೆತ್ ವಾರೆಂಟ್‌ಗೆ ಮೆಜಿಸ್ಟ್ರೇಟರ್ಸಹಿಹಾಕಿದ ಕೆಲವೇ ಗಂಟೆಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

ಮುಕೇಶ್ ಸಿಂಗ್ (32), ಪವನ್ ಗುಪ್ತಾ (25, ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31)- ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು 5.30ಕ್ಕೆ ಗಲ್ಲಿಗೇರಿಸಲಾಗಿದೆ ಎಂದು ತಿಹಾರ್ ಜೈಲಿನ ಮಹಾ ನಿರ್ದೇಶಕ ಸಂದೀಪ್ ಗೋಯೆಲ್ ಹೇಳಿದ್ದಾರೆ. ತಿಹಾರ್ ಜೈಲಿನಲ್ಲಿ ಇದೇ ಮೊದಲ ಬಾರಿ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಿದ್ದು.

2012 ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 23ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ತಪ್ಪಿಸತ್ಥರಾದಇವರಿಗೆ ಮರಣ ದಂಡನೆ ವಿಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿಯು ಘಟನೆ ನಡೆದ13 ದಿನಗಳ ನಂತರ ಸಾವಿಗೀಡಾಗಿದ್ದಳು. ಅಪರಾಧಿಗಳಿಗೆ ಗಲ್ಲು ಶಿಕ್ಷೆ ತೀರ್ಪು ಪ್ರಕಟವಾಗಿದ್ದರೂ ಜನವರಿ ತಿಂಗಳಿನಿಂದ ಮೂರು ಬಾರಿ ಗಲ್ಲಿಗೇರಿಸುವ ದಿನಾಂಕ ಬದಲಾಗಿತ್ತು. ಅಪರಾಧಿಗಳು ಕಾನೂನಿನ ಪ್ರಕ್ರಿಯೆಗಳನ್ನು ಪೂರೈಸಲು ತೆಗೆದುಕೊಂಡ ಸಮಯದಿಂದಾಗಿ ದಿನಾಂಕ ಬದಲಾಗುತ್ತಲೇ ಇತ್ತು.

ADVERTISEMENT

ಇದನ್ನೂ ಓದಿ: 'ನಿರ್ಭಯಾ' ಪ್ರಕರಣ: ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಜಾರಿ

ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.ಇದರಲ್ಲಿ ಆರನೇ ಆರೋಪಿ ರಾಮ್ ಸಿಂಗ್ 2013 ಮಾರ್ಚ್ 11ರಂದು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು .ಅದೇ ವೇಳೆ ಬಾಲಾಪರಾಧಿಗೆ ಮೂರು ವರ್ಷ ಶಿಕ್ಷೆ ನೀಡಿಬಿಡುಗಡೆ ಮಾಡಲಾಗಿದೆ.

'ಕೊನೆಗೂ ಅವರನ್ನು ಗಲ್ಲಿಗೇರಿಸಲಾಯಿತು. ಇದೊಂದು ಸುದೀರ್ಘ ಹೋರಾಟ. ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿತು.ದೇಶದ ಹೆಣ್ಣು ಮಕ್ಕಳಿಗೆ ಈ ದಿನ ಅರ್ಪಣೆ. ಸರ್ಕಾರ ಹಾಗೂ ಕಾನೂನು ವ್ಯವಸ್ಥೆಗೆ ಧನ್ಯವಾದ' ಎಂದು ನಿರ್ಭಯಾಳ ಅಮ್ಮ ಪ್ರತಿಕ್ರಿಯಿಸಿದ್ದಾರೆ.

ನಾನು ಸುಪ್ರೀಂಕೋರ್ಟ್‌ನಿಂದ ಬಂದ ಕೂಡಲೇ ಮಗಳ ಫೋಟೊ ತಬ್ಬಿಕೊಂಡು ಇವತ್ತು ನಿನಗೆ ನ್ಯಾಯ ಲಭಿಸಿತು ಎಂದು ಹೇಳಿದೆ. ವಿಳಂಬವಾದರೂ ನ್ಯಾಯ ಸಿಕ್ಕಿತು ಎಂದು ಅವರು ಹೇಳಿದ್ದಾರೆ.

ಮಗಳಿಗೆ ನ್ಯಾಯ ಸಿಕ್ಕಿದ ಈ ದಿನವನ್ನು ನ್ಯಾಯದಿನಎಂದು ಘೋಷಿಸಬೇಕು ಎಂದು ನಿರ್ಭಯಾಳ ಅಪ್ಪಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.