ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಆಗಿ ನಿತಿನ್‌ ಅಗರವಾಲ್‌ ಆಯ್ಕೆ

ಪಿಟಿಐ
Published 18 ಅಕ್ಟೋಬರ್ 2021, 14:09 IST
Last Updated 18 ಅಕ್ಟೋಬರ್ 2021, 14:09 IST
ಉತ್ತರ ಪ್ರದೇಶ ವಿಧಾನಸಭೆ ಕಲಾಪದ ದೃಶ್ಯ (ಸಂಗ್ರಹ ಚಿತ್ರ) – ಪಿಟಿಐ ಚಿತ್ರ
ಉತ್ತರ ಪ್ರದೇಶ ವಿಧಾನಸಭೆ ಕಲಾಪದ ದೃಶ್ಯ (ಸಂಗ್ರಹ ಚಿತ್ರ) – ಪಿಟಿಐ ಚಿತ್ರ   

ಲಖನೌ: ಬಿಜೆಪಿ ಬೆಂಬಲಿತ, ಸಮಾಜವಾದಿ ಪಕ್ಷದ ಬಂಡಾಯ ಅಭ್ಯರ್ಥಿ ನಿತಿನ್‌ ಅಗರವಾಲ್‌ ಅವರು ಉತ್ತರಪ್ರದೇಶ ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಆಗಿ ಸೋಮವಾರ ಆಯ್ಕೆಯಾದರು.

ಪಕ್ಷದ ಅಧಿಕೃತ ಅಭ್ಯರ್ಥಿ ನರೇಂದ್ರ ವರ್ಮಾ ಅವರನ್ನು ಅಗರವಾಲ್‌ ಅವರು 244 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಚಲಾವಣೆಗೊಂಡ 368 ಮತಗಳ ಪೈಕಿ ನಾಲ್ಕು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ಅಗರವಾಲ್‌ ಅವರು 304 ಮತಗಳನ್ನು ಪಡೆದರು. ವಿರೋಧ ಪಕ್ಷಗಳಾದ ಬಿಎಸ್‌ಪಿ ಹಾಗೂ ಕಾಂಗ್ರೆಸ್‌ ಈ ಚುನಾವಣೆಯನ್ನು ಬಹಿಷ್ಕರಿಸಿದ್ದವು.

ADVERTISEMENT

ಹರ್ದೋಯಿ ವಿಧಾನಸಭೆಯಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ನಿತಿನ್‌, ಮಾಜಿ ಸಚಿವ ನರೇಶ್‌ ಅಗರವಾಲ್‌ ಅವರ ಪುತ್ರ. ನರೇಶ್‌ ಅವರು ಇತ್ತೀಚೆಗೆ ಸಮಾಜವಾದಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.