ADVERTISEMENT

ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ: ಒಂದು ತಿಂಗಳಲ್ಲಿ 38 ಬೋಧಕರ ಸಾವು

ಪಿಟಿಐ
Published 16 ಮೇ 2021, 15:24 IST
Last Updated 16 ಮೇ 2021, 15:24 IST
ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ   

ಅಲೀಗಡ: ಕಳೆದ ಒಂದು ತಿಂಗಳಲ್ಲಿ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ 21 ಮಂದಿ ಸೇರಿದಂತೆ ಒಟ್ಟು 38 ಬೋಧಕರು ಕೋವಿಡ್‌–19 ಲಕ್ಷಣಗಳಿಂದ ಮೃತಪಟ್ಟಿದ್ದು, ಹೊಸ ರೂಪಾಂತರಿ ತಳಿ ವ್ಯಾಪಿಸಿರುವ ಸಾಧ್ಯತೆಗಳ ಕುರಿತು ಅನುಮಾನ ವ್ಯಕ್ತವಾಗಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಕೋವಿಡ್‌–19ನಿಂದ ಮೃತಪಟ್ಟವರಲ್ಲಿ ಯಾವುದೇ ಹೊಸ ರೂಪಾಂತರ ವೈರಸ್‌ ಪತ್ತೆಯಾಗಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಸಾವಿಗೆ ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿ ಕಾರಣವೇ ಎಂಬುದನ್ನು ಪತ್ತೆ ಹಚ್ಚಲು ಎಎಂಯು ಕ್ಯಾಂಪಸ್‌ ಮತ್ತು ಸಮೀಪದ ಪ್ರದೇಶದ ಜನರಿಂದ ಸಂಗ್ರಹಿಸಿದ ಸ್ಯಾಂಪಲ್‌ ಅನ್ನು ನವದೆಹಲಿಯ ಸಿಎಸ್‌ಐಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಜೆನೊಮಿಕ್ಸ್ ಅಂಡ್‌ ಇಂಟಗ್ರೇಟಿವ್‌ ಬಯಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು

ADVERTISEMENT

ನವದೆಹಲಿಯ ಸಿಎಸ್‌ಐಆರ್‌ಗೆ ಕಳುಹಿಸಲಾದ ಮಾದರಿಗಳಲ್ಲಿ ಕೊರೊನಾ ವೈರಸ್‌ನ ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ ಎಂದು ಜೆಎನ್‌ಎಂಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.