ADVERTISEMENT

‘ಕಮಲಾ ಹ್ಯಾರಿಸ್‌ ನಾಮನಿರ್ದೇಶನ; ಭಾರತೀಯರಿಗೆ ಹೆಮ್ಮೆಯ ಕ್ಷಣ’: ಪನ್ನೀರ್‌ಸೆಲ್ವಂ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 11:47 IST
Last Updated 12 ಆಗಸ್ಟ್ 2020, 11:47 IST
ಪನ್ನೀರಸೆಲ್ವಂ
ಪನ್ನೀರಸೆಲ್ವಂ   

ಚೆನ್ನೈ: ಅಮೆರಿಕ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡಿರುವುದು ಭಾರತ ಮತ್ತು ತಮಿಳುನಾಡಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಸಂತಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯ ಮೂಲದ ಮೊದಲ ಸೆನೆಟರ್‌ ಎಂಬ ಹಿರಿಮೆ ಕಮಲಾ ಹ್ಯಾರಿಸ್‌ ಅವರದ್ದಾಗಿದೆ. ಅವರ ತಾಯಿ ಶ್ಯಾಮಲಾ ಅವರು ತಮಿಳುನಾಡಿನ ಮೂಲದವರು ಎಂದು ನೆನಪಿಸಿಕೊಂಡಿರುವ ಮುಖ್ಯಮಂತ್ರಿ ಅವರು ಟ್ವೀಟ್‌ ಮೂಲಕ ಹ್ಯಾರಿಸ್‌ ಅವರಿಗೆ ಶುಭ ಕೋರಿದ್ದಾರೆ.

ಹ್ಯಾರಿಸ್‌ ಅವರ ತಾಯಿ ಶ್ಯಾಮಲಾ ಅವರು ಸ್ವಾತಂತ್ರ್ಯ ಹೋರಾಟಗಾರ ಪಿ.ವಿ.ಗೋಪಾಲನ್‌ ಅವರ ಪುತ್ರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.