ADVERTISEMENT

ನಾಗರಿಕ ಸೇವಾ ಪರೀಕ್ಷೆ, ವಯೋಮಿತಿ ಸಡಿಲಿಕೆ  ಕಾರ್ಯಸಾಧುವಲ್ಲ: ಜಿತೇಂದ್ರ ಸಿಂಗ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 14:01 IST
Last Updated 20 ಜುಲೈ 2022, 14:01 IST

ನವದೆಹಲಿ: ಈಗಿರುವ ಅವಕಾಶಗಳಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ ವಯೋಮಿತಿ ಮತ್ತು ಪ್ರಯತ್ನಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡುವುದು ಕಾರ್ಯಸಾಧುವಲ್ಲ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.

ಕೋವಿಡ್‌ 19 ಕಾರಣದಿಂದಾಗಿ ಸಿವಿಲ್ ಸರ್ವಿಸ್‌ ಪರೀಕ್ಷೆ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಮತ್ತು ಹೆಚ್ಚುವರಿ ಅವಕಾಶ ನೀಡುವ ವಿಷಯವನ್ನು ಆಕಾಂಕ್ಷಿಗಳ ರಿಟ್‌ ಅರ್ಜಿ ಮೂಲಕ ಸುಪ್ರೀಂ ಕೋರ್ಟ್‌ ಮುಂದೆ ತರಲಾಗಿತ್ತು. ಕೋರ್ಟ್‌ ತೀರ್ಪು ಆಧಾರದ ಮೇಲೆ ವಯೋಮಿತಿ ಸಡಿಲಿಕೆ ಮತ್ತು ಹೆಚ್ಚುವರಿ ಅವಕಾಶ ನೀಡುವುದು ಕಾರ್ಯಸಾಧುವಲ್ಲ. ಕೋವಿಡ್‌ನಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT