ADVERTISEMENT

ಮದರಸಾ, ಸಂಸ್ಕೃತ ಶಾಲೆ ಮುಚ್ಚಲು ಅಸ್ಸಾಂ ಸರ್ಕಾರ ತೀರ್ಮಾನ

ಪಿಟಿಐ
Published 17 ಅಕ್ಟೋಬರ್ 2020, 10:41 IST
Last Updated 17 ಅಕ್ಟೋಬರ್ 2020, 10:41 IST
 ಹಿಮಂತ ಬಿಸ್ವಶರ್ಮ
ಹಿಮಂತ ಬಿಸ್ವಶರ್ಮ   

ಗುವಾಹಟಿ: ಸರ್ಕಾರದ ವತಿಯಿಂದ ನಡೆಯುತ್ತಿರುವ ಎಲ್ಲ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅಧಿಸೂಚನೆಯನ್ನು ನವೆಂಬರ್‌ನಲ್ಲಿ ಹೊರಡಿಸಲಾಗುವುದು ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಶರ್ಮ ಶನಿವಾರ ತಿಳಿಸಿದ್ದಾರೆ.

ಮದರಸಾ ಶಿಕ್ಷಣ ಮಂಡಳಿಯನ್ನು ವಿಸರ್ಜಿಸಲಿದ್ದು, ಎಲ್ಲ ಮದರಸಾಗಳನ್ನು ಪ್ರೌಢಶಾಲೆಗಳಾಗಿ ಪರಿವರ್ತಿಸಲಾಗುವುದು. ದೈನಿಕ ತರಗತಿಗಳಿಗಾಗಿ ಹೊಸದಾಗಿ ಪ್ರವೇಶ ಆಹ್ವಾನಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು. ಆದರೆ, ಇನ್ನು ಮುಂದೆ ಎಲ್ಲ ವಿದ್ಯಾರ್ಥಿಗಳು ಸಾಮಾನ್ಯ ತರಗತಿಯಲ್ಲಿ ಕಲಿಯುವುದು ಕಡ್ಡಾಯ ಎಂದರು.

ADVERTISEMENT

ಅಂತೆಯೇ, ಸಂಸ್ಕೃತ ಶಿಕ್ಷಣ ಸಂಸ್ಥೆಗಳನ್ನು ಕುಮಾರ ಭಾಸ್ಕರವರ್ಮಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿಸಲಾಗುವುದು. ಈ ಸಂಸ್ಥೆಗಳನ್ನು ಭಾರತೀಯ ಸಂಸ್ಕೃತಿಯ ಕಲಿಕೆ ಮತ್ತು ಸಂಶೋಧನಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.