ADVERTISEMENT

ಎನ್‌ಆರ್‌ಸಿ: ಬಡವರ ಮೇಲೆ ತೆರಿಗೆ: ರಾಹುಲ್ ಗಾಂಧಿ

ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವಕ್ಕೆ ಚಾಲನೆ

ಪಿಟಿಐ
Published 27 ಡಿಸೆಂಬರ್ 2019, 20:27 IST
Last Updated 27 ಡಿಸೆಂಬರ್ 2019, 20:27 IST
ರಾಯಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು ಪಿಟಿಐ ಚಿತ್ರ
ರಾಯಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು ಪಿಟಿಐ ಚಿತ್ರ   

ರಾಯಪುರ: ನೋಟು ರದ್ದತಿ ರೀತಿಯಲ್ಲಿಯೇ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕೂಡ ಜನರಿಗೆ ಹೊರೆಯಾಗಲಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಈ ಪ್ರಯೋಗಗಳು ಬಡವರ ಮೇಲೆ ತೆರಿಗೆ ವಿಧಿಸಿದಂತಾಗಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು,‘2016ರ ನವೆಂಬರ್‌ನಲ್ಲಿ ನೋಟು ರದ್ದತಿ ನಂತರ ಬಡವರು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಈಗ ಮತ್ತೆ ಅವರನ್ನು ಬಳಲುವಂತೆ ಮಾಡಿದೆ’ ಎಂದು ಆಪಾದಿಸಿದ್ದಾರೆ.‘ನೋಟು ರದ್ದತಿಯಾದ ನಂತರ, ಬ್ಯಾಂಕುಗಳಲ್ಲಿಟ್ಟ ಠೇವಣಿಯನ್ನು ನಿಮ್ಮ ಖಾತೆಯಿಂದಲೇ ಹಿಂಪಡೆಯಲಾಗ ಲಿಲ್ಲ. ನಿಮ್ಮ ಸಂಪೂರ್ಣ ಹಣ 15–20 ಶ್ರೀಮಂತರ ಜೇಬಿಗೆ ಹೋಯಿತು. ಎನ್‌ಪಿಆರ್‌ ಅಥವಾ ಎನ್‌ಆರ್‌ಸಿ ಸಹ ಇದರಂತೆಯೇ ಆಗಿವೆ’ ಎಂದರು.‘ಬಡವರು ಅಧಿಕಾರಿಗಳ ಬಳಿ ಹೋಗಿ ತಮ್ಮ ದಾಖಲೆ ತೋರಿಸಿ, ತಮ್ಮ ದಾಖಲೆಯಲ್ಲಿ ಸಣ್ಣ ತಪ್ಪಿದ್ದರೂ ಲಂಚ ನೀಡಬೇಕಾಗುತ್ತದೆ. ಈ ಕೋಟ್ಯಂತರ ರೂಪಾಯಿ ಅದೇ 15 ಮಂದಿಗೆ ಹೋಗುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.