ಸಾಂದರ್ಭಿಕ ಚಿತ್ರ
ನವದೆಹಲಿ: ರಾವತ್‌ಬಾಟಾದಲ್ಲಿ ನಿರ್ಮಿಸಲಾಗುತ್ತಿರುವ ರಾಜಸ್ಥಾನ ಅಣು ವಿದ್ಯುತ್ ಯೋಜನೆಯ ಏಳನೇ ಸ್ಥಾವರ (ಆರ್‌ಎಪಿಪಿ–7) ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು, ಆಗಸ್ಟ್ 1ರಿಂದ ಅದಕ್ಕೆ ಇಂಧನ ಭರ್ತಿ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ ಶುಕ್ರವಾರ ತಿಳಿಸಿದೆ.
ದೇಶದ ಮೂರನೇ ಅತಿದೊಡ್ಡ ಪರಮಾಣು ಸ್ಥಾವರ ಇದಾಗಿದ್ದು, 700 ಮೆಗಾವಾಟ್ ಸಾಮರ್ಥ್ಯ ಹೊಂದಿದೆ. ಈ ವರ್ಷಾಂತ್ಯದಿಂದ ಇದು ಕಾರ್ಯಾರಂಭ ಮಾಡಲಿದೆ. ಇದು ಕಾರ್ಯಾರಂಭ ಶುರು ಮಾಡಿದರೆ, ರಾವತ್‌ಬಾಟಾವು ದೇಶದ ಅತಿದೊಡ್ಡ ಪರಮಾಣು ಪಾರ್ಕ್ ಎಂದು ಕರೆಸಿಕೊಳ್ಳಲಿದೆ. ಮುಂದಿನ ವರ್ಷದಿಂದ ಆರ್‌ಎಪಿಪಿ– 8ಕ್ಕೆ ಚಾಲನೆ ನೀಡಲಾಗುವುದು ಎಂದು ಎನ್‌ಪಿಸಿಐಎಲ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.