ADVERTISEMENT

ಒಡಿಶಾ ಜಿಲ್ಲಾ ಪರಿಷತ್ ಚುನಾವಣೆ: ಬಿಜೆಡಿ ಮೇಲುಗೈ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 18:33 IST
Last Updated 27 ಫೆಬ್ರುವರಿ 2022, 18:33 IST
   

ಭುವನೇಶ್ವರ (ಪಿಟಿಐ): ಘೋಷಿತ 300 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಡಿ 268 ಕಡೆ ಜಯಭೇರಿ ಬಾರಿಸಿದೆ. ಮತ ಎಣಿಕೆ ಎರಡನೇ ದಿನವಾದ ಭಾನುವಾರವೂ ಮುಂದುವರಿದಿದೆ. ಶನಿವಾರ ಶುರುವಾದ ಮತ ಎಣಿಕೆಯು ಸೋಮವಾರವೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ 851 ಜಿಲ್ಲಾ ಪರಿಷತ್‌ಗಳಿಗೆ ಐದು ಹಂತಗಳಲ್ಲಿ ಮತದಾನ ನಡೆದಿತ್ತು. 379 ಕ್ಷೇತ್ರಗಳ ಪೈಕಿ 329ರಲ್ಲಿ ಬಿಜೆಡಿ ಗೆದ್ದಿದೆ ಅಥವಾ ಮುನ್ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT