ADVERTISEMENT

ಒಡಿಶಾ: ಭ್ರಷ್ಟಾಚಾರದ ಆರೋಪ, ಐಎಎಸ್ ಅಧಿಕಾರಿ ವಜಾ

ಪಿಟಿಐ
Published 2 ಫೆಬ್ರುವರಿ 2022, 11:57 IST
Last Updated 2 ಫೆಬ್ರುವರಿ 2022, 11:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ‘ಭ್ರಷ್ಟಾಚಾರದ ಆರೋಪದ ಮೇಲೆ ಒಡಿಶಾ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ವಿನೋದ್ ಕುಮಾರ್ ಅವರನ್ನು ಬುಧವಾರ ಸೇವೆಯಿಂದ ವಜಾಗೊಳಿಸಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

1989ರ ಐಎಎಸ್ ಬ್ಯಾಚ್‌ನ ಅಧಿಕಾರಿಯಾಗಿರುವ ವಿನೋದ್ ಕುಮಾರ್ ಅವರನ್ನು ಕೇಂದ್ರದ ಅನುಮೋದನೆಯ ಮೇರೆಗೆ ವಜಾಗೊಳಿಸಲಾಗಿದೆ. ಒಡಿಶಾ ಗ್ರಾಮೀಣ ವಸತಿ ನಿಗಮದ (ಓಆರ್‌ಎಚ್‌ಡಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ತಿಳಿಸಲಾಗಿದೆ.‌

ವಿನೋದ್ ಅವರು 2018ರಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. ಅವರ ವಿರುದ್ಧ 27 ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿತ್ತು, ಅವುಗಳಲ್ಲಿ ಎರಡರಲ್ಲಿ ಅವರನ್ನು ದೋಷಿ ಎಂದು ಸಾಬೀತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.