ಬಂಧನ
ಸಂಬಲ್ಪುರ: ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದ ಆರೋಪದಡಿ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಸುನಿಲ್ ನಾಗ್ ಎಂದು ಗುರುತಿಸಲಾಗಿದ್ದು, ಐಂತಪಲ್ಲಿಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ಧಾರೆ.
ಸುನಿಲ್ ಬುಧವಾರ ಐಂತಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಭಲುಪಲಿ ಗ್ರಾಮದಲ್ಲಿ ಹಸುವಿನ ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಟವಲ್ ಅನ್ನು ಹಸುವಿನ ಕುತ್ತಿಗೆಗೆ ಸುತ್ತಿ ಗ್ರಿಲ್‌ಗೆ ಕಟ್ಟಿಹಾಕಿ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ಸಂದರ್ಭ ಹಸುವಿನ ಕುತ್ತಿಗೆಗೆ ಟವಲ್ ಬಿಗಿದುಕೊಂಡಿದ್ದರಿಂದ ಹಸು ಸ್ಥಳದಲ್ಲೇ ಮೃತಪಟ್ಟಿದೆ.
ಮನೆಯ ಹೊರಗೆ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಈ ಕುಕೃತ್ಯದ ಸಂಪೂರ್ಣ ದೃಶ್ಯಾವಳಿ ದಾಖಲಾಗಿದೆ. ಹಸುವಿನ ಮಾಲೀಕನ ದೂರಿನ ಆಧಾರದ ಮೇಲೆ ಆರೋಪಿ ಸುನಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಎನ್‌ಎಸ್ ಮತ್ತು ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಈ ಪ್ರದೇಶದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದು, ಕಠಿಣ ಕ್ರಮಕ್ಕೆ ಜನ ಒತ್ತಾಯಿಸಿದ್ದಾರೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.