ADVERTISEMENT

2022–23ನೇ ಸಾಲಿಗೆ ಪರೀಕ್ಷಾ ಪದ್ಧತಿ ಇನ್ನೂ ತೀರ್ಮಾನಿಸದ ಸಿಬಿಎಸ್ಇ

ಪಿಟಿಐ
Published 15 ಏಪ್ರಿಲ್ 2022, 14:01 IST
Last Updated 15 ಏಪ್ರಿಲ್ 2022, 14:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): 2022-23ನೇ ಶೈಕ್ಷಣಿಕ ವರ್ಷಕ್ಕೆ10, 12ನೇ ತರಗತಿಗೆ ವಾರ್ಷಿಕ ಪರೀಕ್ಷೆ ಪದ್ಧತಿ ಅಥವಾಎರಡು ಅವಧಿಗೆ ಶೈಕ್ಷಣಿಕ ವರ್ಷವನ್ನುವಿಭಜಿಸುವ ಪದ್ಧತಿ ಅನುಸರಿಸಬೇಕೆ ಎಂದು ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಇನ್ನೂ ನಿರ್ಧರಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿಯ ಅಧಿಕಾರಿಯೊಬ್ಬರು,2022–23ನೇ ಶೈಕ್ಷಣಿಕ ವರ್ಷಕ್ಕೆ ಯಾವ ಪದ್ಧತಿ ಅನುಸರಿಸಬೇಕು ಎಂಬ ತೀರ್ಮಾನವನ್ನು ಆದಷ್ಟು ಶೀಘ್ರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ 2021–22ನೇ ಶೈಕ್ಷಣಿಕ ಅವಧಿಯಲ್ಲಿ ಬದಲಾವಣೆ ತರಲಾಗಿತ್ತು.ಕಳೆದ ವರ್ಷ ಶೈಕ್ಷಣಿಕ ವರ್ಷವನ್ನು ವಿಭಜಿಸಿದ್ದು, ಮೊದಲ ಅವಧಿಯ ಪರೀಕ್ಷೆ ಡಿಸೆಂಬರ್‌ನಲ್ಲಿ ನಡೆದಿತ್ತು. ಎರಡನೇ ಅವಧಿ ಪರೀಕ್ಷೆಗಳು ಏಪ್ರಿಲ್ 26ರಿಂದ ಆರಂಭವಾಗಬೇಕಿದೆ.

ADVERTISEMENT

ದೆಹಲಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಮತ್ತೆ ಏರುತ್ತಿರುವುದು ಈಗ ಆತಂಕ ಮೂಡಿಸಿದೆ. ಕೆಲವು ಶಾಲೆಗಳು ಈಗಾಗಲೇ ವಿದ್ಯಾರ್ಥಿ ಅಥವಾ ಸಿಬ್ಬಂದಿಗೆ ಸೋಂಕು ತಗುಲಿದ್ದ ಸಂದರ್ಭದಲ್ಲಿ ನಿರ್ದಿಷ್ಟ ತರಗತಿ ಅಥವಾ ವಿಭಾಗವನ್ನು ಬಂದ್ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.