ADVERTISEMENT

ಐಇಡಿ ಪತ್ತೆ ಪ್ರಕರಣ: ಜಮ್ಮುವಿನಲ್ಲಿ ಆರೋಪಿ ಬಂಧನ

ಪಿಟಿಐ
Published 21 ಫೆಬ್ರುವರಿ 2021, 9:10 IST
Last Updated 21 ಫೆಬ್ರುವರಿ 2021, 9:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ‘ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆ ಪ್ರಕರಣದಡಿ ಅಲ್‌–ಬದರ್‌ ಸಂಘಟನೆಯ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಫೆಬ್ರುವರಿ 13 ರಂದು ಜಮ್ಮು ಬಸ್‌ ನಿಲ್ದಾಣದಲ್ಲಿ ನರ್ಸಿಂಗ್‌ ವಿದ್ಯಾರ್ಥಿ ಬಳಿಯಿಂದ 7 ಕೆ.ಜಿಯ ಐಇಡಿ ಸಿಕ್ಕಿತ್ತು. 2019ರಲ್ಲಿ ಫೆಬ್ರುವರಿ 14ರಂದು ನಡೆದ ಪುಲ್ವಾಮ ದಾಳಿಯ ಎರಡನೇ ವರ್ಷಾಚರಣೆ ಸಂದರ್ಭದಲ್ಲಿ ಶ್ರೀನಗರದಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು.

‘ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಬಾತ್‌ಬಾಗ್‌–ಹನಿಪೊರ ಗ್ರಾಮದ ನಿವಾಸಿ ರಹ್‌ ಹುಸೈನ್‌ ಭಟ್‌ನನ್ನು ಬಂಧಿಸಲಾಗಿದೆ. ಈತ ಅಲ್‌–ಬದರ್‌ ಸಂಘಟನೆಯ ಕಾರ್ಯಕರ್ತ. ಈತ ಈ ಉಗ್ರ ಸಂಘಟನೆಯ ಸದಸ್ಯರಿಗೆ ಕಾರ್ಯಾಚರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದ. ಈತನಿಗೆ ರಘುನಾಥ್‌ ಮಂದಿರ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಲು ಸೂಚನೆ ನೀಡಲಾಗಿತ್ತು’ ಎಂದು ಜಮ್ಮುವಿನ ಹಿರಿಯಪೊಲೀಸ್‌ ಅಧಿಕಾರಿ ಮುಖೇಶ್‌ ಸಿಂಗ್‌ ಅವರು ತಿಳಿಸಿದರು.

ADVERTISEMENT

ಈ ಪ್ರಕರಣದಲ್ಲಿ ಈವರೆಗೆ ಒಟ್ಟು ಐವರು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.