ADVERTISEMENT

ಮಹಾರಾಷ್ಟ್ರ: ಕೋವಿಡ್‌ಗೆ ಮೃತರಾದ ಪೊಲೀಸರ ಸಂಖ್ಯೆ 31ಕ್ಕೆ ಏರಿಕೆ

2,349 ಮಂದಿ ಪೊಲೀಸ್‌ ಸಿಬ್ಬಂದಿಗೆ ಕೊರೊನಾ ಸೋಂಕು

ಏಜೆನ್ಸೀಸ್
Published 20 ಜೂನ್ 2020, 4:09 IST
Last Updated 20 ಜೂನ್ 2020, 4:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಹಾರಾಷ್ಟ್ರ: ನಗರದಲ್ಲಿ ಕೋವಿಡ್‌–19 ಸೋಂಕಿಗೆ ಶುಕ್ರವಾರ ಪೊಲೀಸ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ಇದರೊಂದಿಗೆ ಕೋವಿಡ್‌ಗೆ ಬಲಿಯಾದ ಪೊಲೀಸ್‌ ಸಿಬ್ಬಂದಿ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಕೇವಲ ಪೊಲೀಸ್‌ ಇಲಾಖೆಯೊಂದರಲ್ಲೇ ಈವರೆಗೆ 3,349 ಮಂದಿಸೋಂಕಿಗೆ ತುತ್ತಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಇದುವರೆಗೆ 1,20,504 ಮಂದಿಗೆ ಸೋಂಕು ತಗುಲಿದೆ. 5,751 ಮಂದಿ ಸಾವಿಗೀಡಾಗಿದ್ದು, 60,838 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ADVERTISEMENT

ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು, ಮಹಾರಾಷ್ಟ್ರ ಹೆಚ್ಚು ಬಾಧಿತ ರಾಜ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.