ADVERTISEMENT

ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ್ದು ಇಬ್ಬರು ಮಹಿಳೆಯರು ಮಾತ್ರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 12:16 IST
Last Updated 4 ಫೆಬ್ರುವರಿ 2019, 12:16 IST
   

ತಿರುವನಂತಪುರಂ: ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಶಬರಿಮಲೆ ದೇಗುಲ ಪ್ರವೇಶಿಸಿದ್ದು ಇಬ್ಬರು ಮಹಿಳೆಯರು ಮಾತ್ರ ಎಂದು ಕೇರಳ ಸರ್ಕಾರ ಹೇಳಿದೆ. ಈ ಹಿಂದೆ 17 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಸರ್ಕಾರ ಹೇಳಿತ್ತು.

ಶಬರಿಮಲೆ ಎಕ್ಸಿಕ್ಯೂಟಿವ್ ಅಧಿಕಾರಿಯ ವರದಿ ಪ್ರಕಾರ ಶಬರಿಮಲೆ ದೇಗುಲದೊಳಗೆ ಪ್ರವೇಶಿಸಿದ್ದು ಇಬ್ಬರು ಮಹಿಳೆಯರು ಮಾತ್ರ ಎಂದು ದೇವಸ್ವಂ ಸಚಿವಕಂಡಕಂಪಳ್ಳಿ ಸುರೇಂದ್ರನ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಶ್ರೀಲಂಕಾ ಮೂಲದ ಮಹಿಳೆ ದೇವಾಲಯ ಪ್ರವೇಶಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಇಲ್ಲ ಸಚಿವರು ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಶಬರಿಮಲೆಗೆ 17 ಮಂದಿ ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಹೇಳಿತ್ತು.ಈ ಹಿಂದೆ 51 ಮಂದಿ ದೇಗುಲ ಪ್ರವೇಶಿಸಿದ್ದಾರೆ ಎಂದು ಸರ್ಕಾರ ಸಲ್ಲಿಸಿದ್ದ ಪಟ್ಟಿಯಲ್ಲಿ 50 ವರ್ಷ ಮೀರಿದವರು ಮತ್ತುಗಂಡಸರ ಹೆಸರೂ ಇದ್ದಿದ್ದರಿಂದ ಅದು ವಿವಾದ ಸೃಷ್ಟಿಸಿದ್ದತ್ತು. ಈ ಪಟ್ಟಿಯನ್ನು ತಿದ್ದಿದ ಸರ್ಕಾರ ಆನಂತರ 17 ಮಂದಿ ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಹೇಳಿತ್ತು. ಆದರೆ ಈಗ ಇಬ್ಬರು ಮಹಿಳೆಯರು ಮಾತ್ರ ದೇವಾಲಯ ಪ್ರವೇಶಿಸಿರುವುದರ ಬಗ್ಗೆ ಸಾಕ್ಷ್ಯಗಳಿರುವುದು ಎಂದು ಸರ್ಕಾರ ಹೇಳಿದೆ.

ಅದೇ ವೇಳೆ ದೇವರ ದರ್ಶನ ಪಡೆಯಲು ಬರುವ ಮಹಿಳೆಯರಿಗೆ ಭದ್ರತೆ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿಲ್ಲ ಎಂದು ಸಚಿವರು ಹೇಳಿದ್ದಾರೆ.
ಶಬರಿಮಲೆಯ ಅರ್ಚಕರು ದೇವಸ್ವಂ ನೌಕರ ಅಲ್ಲ, ದೇವಸ್ವಂ ಕೈಪಿಡಿ ಪ್ರಕಾರ ಇನ್ನಿತರ ನೌಕರರಂತೆ ಶಬರಿಮಲೆ ಅರ್ಚಕರು ಕೆಲಸ ಮಾಡೇಬೇಕು.ದೇವಾಲಯದಲ್ಲಿ ಸಂಪ್ರದಾಯ ಉಲ್ಲಂಘನೆಯಾದರೆ ಬಾಗಿಲು ಮುಚ್ಚಿ ಶುದ್ಧಿ ಕೆಲಸ ಮಾಡಬೇಕೆಂದು ದೇವಸ್ವಂ ಕೈಪಿಡಿಯಲ್ಲಿ ಹೇಳಲಿಲ್ಲ.ಶುದ್ಧಿಕ್ರಿಯೆ ಅಗತ್ಯವಾದರೆ ದೇವಸ್ವಂ ಮಂಡಳಿ ಜತೆ ಸಮಾಲೋಚನೆ ನಡೆಸಿ ಅದನ್ನು ಮಾಡಬೇಕು. ಆದರೆ ಕಳೆದ ಬಾರಿ ಶುದ್ಧಿಕ್ರಿಯೆ ನಡೆಸಿದಾಗ ಈ ರೀತಿ ಅನುಮತಿ ಪಡೆದಿಲ್ಲ ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.