ADVERTISEMENT

ದೇಶ ವಿಭಜನೆಯ ದಿನವು ಸಹಿಷ್ಣುತೆಯನ್ನು ಗೌರವಿಸುವ ದಿನವೂ ಹೌದು: ಪ್ರಧಾನಿ ಮೋದಿ

ಪಿಟಿಐ
Published 14 ಆಗಸ್ಟ್ 2025, 14:25 IST
Last Updated 14 ಆಗಸ್ಟ್ 2025, 14:25 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

(ಸಂಗ್ರಹ ಚಿತ್ರ) 

ನವದೆಹಲಿ: ದೇಶ ‘ವಿಭಜನೆಯ ಕರಾಳ ನೆನಪಿನ ದಿನ’ವು ಸಾಮರಸ್ಯ ಬಲದ ಮೂಲಕ ದೇಶದ ಏಕತೆಯನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿಯನ್ನು ನೆನಪಿಸುವ ದಿನವೂ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ADVERTISEMENT

ವಿಭಜನೆ ಸಂದರ್ಭದಲ್ಲಿ ಕೋಮು ದಳ್ಳುರಿಯಿಂದ ಉಂಟಾದ ಅಪಾರ ಸಾವು– ನೋವು, ಜನರು ತಮ್ಮ ಮೂಲ ಬೇರನ್ನು ತೊರೆದು ಹೋಗುವಾಗ ಅನುಭವಿಸಿದ ಸಂಕಟವನ್ನು ದೇಶವು ಸ್ಮರಿಸುತ್ತದೆ.

‘ವಿಭಜನೆಯಿಂದ  ಊಹಿಸಲು ಸಾಧ್ಯವಾಗದಷ್ಟು ಹಾನಿ ಆಗಿದ್ದರೂ, ಅದನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡ ಜನರ ‘ಸಹಿಷ್ಣುತೆ’ಯನ್ನು ಗೌರವಿಸುವ ದಿನವೂ ಇದಾಗಿದೆ‘  ಎಂದು ಪ್ರಧಾನಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.