ADVERTISEMENT

ಲಸಿಕೆ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 1.91 ಕೋಟಿ ಡೋಸ್‌ಗಳು ಲಭ್ಯ

ಪಿಟಿಐ
Published 13 ಜುಲೈ 2021, 9:46 IST
Last Updated 13 ಜುಲೈ 2021, 9:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆಯ 1.91 ಕೋಟಿಗೂ ಹೆಚ್ಚು ಡೋಸ್‌ಗಳು ಲಭ್ಯವಿವೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

‘ಈವರೆಗೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ 39.46 ಕೋಟಿಗೂಹೆಚ್ಚು ಡೋಸ್‌ಗಳನ್ನು ವಿತರಿಸಿದೆ.

‘ಇದರಲ್ಲಿ ‍ಪೋಲಾಗಿರುವ ಲಸಿಕೆ ಸೇರಿ ಒಟ್ಟು 37,55,38,390 ಡೋಸ್‌ಗಳನ್ನು ಉಪಯೋಗಿಸಲಾಗಿದೆ. ಇನ್ನೂ1.91 ಕೋಟಿಗೂ ಹೆಚ್ಚು ಡೋಸ್‌ಗಳು ಬಾಕಿ ಉಳಿದಿವೆ ’ ಎಂದು ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.