ADVERTISEMENT

ಪ್ರಸಿದ್ಧ ಹೃದ್ರೋಗತಜ್ಞ ಡಾ ಕೆಕೆ ಅಗರ್‌ವಾಲ್ ಕೋವಿಡ್‌ ಸೋಂಕಿಗೆ ಬಲಿ

ಪಿಟಿಐ
Published 18 ಮೇ 2021, 5:33 IST
Last Updated 18 ಮೇ 2021, 5:33 IST
ಡಾ. ಕೆಕೆ ಅಗರ್‌ವಾಲ್
ಡಾ. ಕೆಕೆ ಅಗರ್‌ವಾಲ್   

ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಹೃದ್ರೋಗತಜ್ಞರಾಗಿದ್ದ ಡಾ. ಕೆಕೆ ಅಗರ್‌ವಾಲ್ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅವರ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಡಾ. ಅಗರ್‌ವಾಲ್ (62) ಈ ಮೊದಲು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರನ್ನು ಕಳೆದ ವಾರ ಏಮ್ಸ್‌ಗೆ ದಾಖಲಿಸಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಅವರು ಸೋಮವಾರ ರಾತ್ರಿ 11:30ಕ್ಕೆ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ಅವರು ವಿವಿಧ ಉಪನ್ಯಾಸ ಮತ್ತು ಶೈಕ್ಷಣಿಕ ಮಾಹಿತಿ ಸರಣಿ ವಿಡಿಯೊ ಮೂಲಕ 10 ಕೋಟಿಗೂ ಅ‌ಧಿಕ ಜನರನ್ನು ಆನ್‌ಲೈನ್ ಬಳಸಿ ತಲುಪಿದ್ದರು. ಜನರಿಗೆ ವಿವಿಧ ಮಾಹಿತಿ ನೀಡುವ ಮೂಲಕ ಅಸಂಖ್ಯ ಜೀವಗಳನ್ನು ಕಾಪಾಡಿದ್ದರು ಎಂದು ಅವರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.