ADVERTISEMENT

ಪಹಲ್ಗಾಮ್‌ ಉಗ್ರ ದಾಳಿ ಸಂತ್ರಸ್ತ ಸೇರಿ 56 ಮಂದಿಗೆ ಜಮ್ಮು ಸರ್ಕಾರದ ಪ್ರಶಸ್ತಿ

ಪಿಟಿಐ
Published 26 ಜನವರಿ 2026, 15:30 IST
Last Updated 26 ಜನವರಿ 2026, 15:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜಮ್ಮು: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಪ್ರವಾಸಿಗರನ್ನು ಉಳಿಸಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡ ಆದಿಲ್‌ ಹುಸ್ಸೇನ್ ಶಾ ಸೇರಿದಂತೆ 56 ಜನರಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರಶಸ್ತಿ ಘೋಷಿಸಿದೆ.

ವಿವಿಧ ಹಿನ್ನೆಲೆಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದವರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಹಲ್ಗಾಮ್‌ ನಿವಾಸಿ ಹುಸ್ಸೇನ್ ಶಾ ಅವರು ಕಳೆದ ವರ್ಷ ಏಪ್ರಿಲ್‌ 22ರಂದು ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಸೆಟೆದುನಿಂತು ಹಲವು ಪ್ರವಾಸಿಗರನ್ನು ರಕ್ಷಿಸಿದ್ದರು. ಅವರ ಶೌರ್ಯ ಮತ್ತು ಸಾಹಸವನ್ನು ಪರಿಗಣಿಸಿ ಮರಣೋತ್ತರವಾಗಿ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರಲಿದೆ ಎಂದು ಹೇಳಿದ್ದಾರೆ.