ADVERTISEMENT

ಪಾಕ್‌ ಜೈಲಲ್ಲಿದ್ದ ಭಾರತೀಯನ ಬಿಡುಗಡೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 19:17 IST
Last Updated 9 ಆಗಸ್ಟ್ 2018, 19:17 IST

ಜೈಪುರ (ಪಿಟಿಐ): 36 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತ ಮೂಲದ ಗಜಾನಂದ ಎಂಬುವರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಸದ್ಯ 68 ವರ್ಷ ವಯೋಮಾನದ ಗಜಾನಂದ ಅವರನ್ನು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್‌ ತಿಳಿಸಿದ್ದಾರೆ.

ಲಾಹೋರ್‌ ಜೈಲಿನಲ್ಲಿರುವ ಗಜಾನಂದ ಅವರನ್ನು ಆ. 13ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

‘ಗಜಾನಂದ ಹೇಗೆ ಪಾಕಿಸ್ತಾನ ಪ್ರವೇಶಿಸಿದ ಎಂಬ ಬಗ್ಗೆ ಮಾಹಿತಿ ಇಲ್ಲ. ಗಡಿ ದಾಟಿ ಹೋಗಿದ್ದ ಗಜಾನಂದಗೆ ಪಾಕಿಸ್ತಾನ ಸರ್ಕಾರ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಆ ನಂತರ ಭಾರತ ರಾಯಭಾರಿ ಕಚೇರಿ ಸಂಪರ್ಕ ಸಿಗದ ಕಾರಣ ಗಜಾನಂದ ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಯಿತು’ ಎಂದು ಜೈಪುರ ಸಂಸದ ರಾಮಚರಣ್‌ ಬೊಹ್ರಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.