ADVERTISEMENT

ಪಾಕಿಸ್ತಾನ ವಾಯು ಪ್ರದೇಶ ಬಳಸಲು ಪ್ರಧಾನಿ ಮೊದಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 13:05 IST
Last Updated 27 ಅಕ್ಟೋಬರ್ 2019, 13:05 IST
   

ಬೆಂಗಳೂರು: ಪಾಕಿಸ್ತಾನ ಸರ್ಕಾರ ಪ್ರಧಾನಿ ಮೋದಿಯವರಿಗೆತನ್ನ ವಾಯು ಪ್ರದೇಶದಲ್ಲಿ ಪ್ರಯಾಣಿಸಲು ಅನುಮತಿ ನಿರಾಕರಿಸಿದೆ.

ಸೌದಿ ಅರೇಬಿಯಾಕ್ಕೆ ತೆರಳಲು ಪಾಕಿಸ್ತಾನವಾಯು ಪ್ರದೇಶವನ್ನು ಬಳಸಲು ಕೇಂದ್ರ ಸರ್ಕಾರ ಪಾಕಿಸ್ತಾನದ ಅನುಮತಿ ಕೋರಿತ್ತು. ಅದರೆ, ತನ್ನ ವಾಯು ಪ್ರದೇಶವನ್ನು ಬಳಸಲು ಪಾಕಿಸ್ತಾನ ಅನುಮತಿಯನ್ನು ನಿರಾಕರಿಸಿದೆ.ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮದ್‌ ಕುರೈಷಿ ಅವರು ಭಾರತೀಯ ಹೈ ಕಮಿಷನ್‌ಗೆ ಪತ್ರ ಬರೆದಿದ್ದಾರೆ.

ಭಾರತ ಸರ್ಕಾರವು ಕಾಶ್ಮೀರದವಿಶೇಷಾಧಿಕಾರ ತೆರವುಗೊಳಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವು ಹದಗೆಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.