ADVERTISEMENT

ಭಾರತದ ಗಡಿ ದಾಟಿ ಬಂದ ಪಾಕಿಸ್ತಾನದ ಡ್ರೋನ್‌

ಪಿಟಿಐ
Published 14 ಮಾರ್ಚ್ 2021, 14:29 IST
Last Updated 14 ಮಾರ್ಚ್ 2021, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಪಾಕಿಸ್ತಾನದ ಡ್ರೋನ್‌ ಭಾನುವಾರ ಭಾರತದ ಗಡಿಯನ್ನು ಪ್ರವೇಶಿಸಿದ್ದು, ಇದನ್ನು ಗುರುತಿಸುತ್ತಿದ್ದಂತೆ ಬಿಎಸ್ಎಫ್ ಯೋಧರು ಅದರತ್ತ ಗುಂಡು ಹಾರಿಸಿದ್ದಾರೆ. ಗುಂಡಿನದಾಳಿ ಹಿಂದೆಯೇ ಡ್ರೋನ್‌‌ ಪಾಕ್‌ನ ಪಠಾಣ್‌ಕೋಟ್‌ ಜಿಲ್ಲೆಯತ್ತ ತೆರಳಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್‌ ಅಧಿಕಾರಿಗಳು, ಪಾಕ್‌ ಗಡಿಯಿಂದ ಬಂದ ಡ್ರೋನ್‌ ಅನ್ನು ಭಾರತ ಮತ್ತು ಪಾಕ್ ಗಡಿಯ ಬಳಿ ಡಿಂಡಾ ಪೋಸ್ಟ್‌ ಬಳಿ ಭದ್ರತಾ ಸಿಬ್ಬಂದಿ ಗುರುತಿಸಿತು ಎಂದು ಪಠಾಣ್‌ಕೋಟ್‌ನ ಹಿರಿಯ ಪೊಲೀಸ್‌ ಅಧಿಕಾರಿ ಗುಲ್‌ನೀತ್‌ ಸಿಂಗ್‌ ಖುರಾನಾ ತಿಳಿಸಿದ್ದಾರೆ.

ಗಡಿ ದಾಟಿ ಬಂದ ಡ್ರೋನ್‌ನಿಂದ ಭಾರತದ ಗಡಿಯಲ್ಲಿ ಏನಾದರೂ ಹಾಕಲಾಗಿದೆಯೇ ಎಂಬ ಪ್ರಶ್ನೆಗೆ, ಈ ಕುರಿತು ಗಡಿ ಭಾಗದಲ್ಲಿ ತಪಾಸಣೆ ನಡೆಯಿತು. ಆದರೆ, ಅಂತಹ ಯಾವುದೇ ಪರಿಕರಗಳು, ವಸ್ತುಗಳು ಪತ್ತೆಯಾಗಲಿಲ್ಲ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಡಿಸೆಂಬರ್ 2020ರಲ್ಲಿ ಪಾಕಿಸ್ತಾನ ಕಡೆಯಿಂದ ಬಂದ ಡ್ರೋನ್‌ನಿಂದ 11 ಹ್ಯಾಂಡ್ ಗ್ರೆನೇಡ್‌ಗಳನ್ನು ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.