ADVERTISEMENT

‘ಮಾಧ್ಯಮ ನಿಯಂತ್ರಣ ಪ್ರಾಧಿಕಾರ’ ರಚನೆಗೆ ಜಂಟಿ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 15:36 IST
Last Updated 16 ಡಿಸೆಂಬರ್ 2021, 15:36 IST
   

ನವದೆಹಲಿ: ಮುದ್ರಣ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅಡಕಗಳ ಮೇಲೆ ಕಣ್ಗಾವಲು ಇಡಲು ಹಾಗೂ ನಿಯಂತ್ರಿಸಲು ಶಾಸನಬದ್ಧವಾದ ‘ಮಾಧ್ಯಮ ನಿಯಂತ್ರಣ ಪ್ರಾಧಿಕಾರ‘ ರಚಿಸಬೇಕು ಎಂದು ಸಂಸದೀಯ ಸಮಿತಿಯು ಗುರುವಾರ ಶಿಫಾರಸು ಮಾಡಿದೆ.

ವ್ಯಕ್ತಿಗತ ವಿವರ ರಕ್ಷಣಾ ಮಸೂದೆ 2019 ಕುರಿತ ಬಿಜೆಪಿ ಸಂಸದ ಪಿ.ಪಿ.ಚೌಧರಿ ನೇತೃತ್ವದ ಜಂಟಿ ಸಮಿತಿಯ ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಯಿತು. ಭಾರತೀಯ ಪತ್ರಿಕಾ ಮಂಡಳಿ ಮಾದರಿಯಲ್ಲೇ ಪ್ರಾಧಿಕಾರವನ್ನು ರಚಿಸಬಹುದು ಎಂದು ಸಮಿತಿ ಹೇಳಿದೆ.

ದೇಶದಲ್ಲಿ ಸುದ್ಧಿ ಮಾಧ್ಯಮವನ್ನು ಒಟ್ಟಾಗಿ ನಿಯಂತ್ರಿಸುವ ಒಂದೂ ಸಂಸ್ಥೆಯೂ ಸದ್ಯ ಇಲ್ಲ. ಹಾಲಿ ಇರುವ ಭಾರತೀಯ ಪತ್ರಿಕಾ ಮಂಡಳಿಯು ಇದಕ್ಕೆ ಪೂರ್ಣ ಸನ್ನದ್ಧವಾಗಿಲ್ಲ. ಈ ಕಾರಣದಿಂದ ಪ್ರತ್ಯೇಕ ಪ್ರಾಧಿಕಾರದ ರಚನೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದೆ.

ADVERTISEMENT

ಮೂಲ ಕಂಪನಿಯು ಭಾರತದಲ್ಲಿ ತಂತ್ರಜ್ಞಾನ ಆಧರಿತ ಕಚೇರಿಯನ್ನು ಸ್ಥಾಪಿಸದೇ ಇದ್ದಲ್ಲಿ, ಯಾವುದೇ ಸಾಮಾಜಿಕ ಜಾಲತಾಣದ ಮಾಧ್ಯಮ ವೇದಿಕೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ಸಮಿತಿಯು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.