ADVERTISEMENT

ಭ್ರಷ್ಟಾಚಾರ ಆರೋಪ: ತನಿಖೆಗೆ ಹಾಜರಾದ ಪರಮ್‌ಬೀರ್ ಸಿಂಗ್

ಪಿಟಿಐ
Published 29 ನವೆಂಬರ್ 2021, 12:38 IST
Last Updated 29 ನವೆಂಬರ್ 2021, 12:38 IST
ಪರಮ್‌ಬೀರ್ ಸಿಂಗ್‌
ಪರಮ್‌ಬೀರ್ ಸಿಂಗ್‌   

ಮುಂಬೈ (ಪಿಟಿಐ): ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್‌ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತು ತನಿಖೆ ನಡೆಸುತ್ತಿರುವ ತನಿಖಾ ಸಮಿತಿಯ ಎದುರು ಸೋಮವಾರ ಮುಂಬೈಯ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ಬೀರ್ ಸಿಂಗ್‌ ಹಾಜರಾದರು.

ಸಿಂಗ್ ಅವರು ಹಾಜರಾದ್ದರಿಂದ ನ್ಯಾಯಮೂರ್ತಿ ಕೆ.ಯು.ಚಾಂದಿವಾಲ್ ಸಮಿತಿಯು ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ನೀಡಬಹುದಾದ ವಾರೆಂಟ್‌ ಅನ್ನು ರದ್ದುಗೊಳಿಸಿತು ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹15 ಸಾವಿರ ಠೇವಣಿ ಇಡುವಂತೆ ಆದೇಶಿಸಿತು.

ಆಗಿನ ಗೃಹಮಂತ್ರಿ ಮತ್ತು ಎನ್‌ಸಿಪಿ ನಾಯಕ ದೇಶಮುಖ್ ಅವರ ಮೇಲೆ ಸಿಂಗ್ ಅವರು ಹೂಡಿದ್ದ ಆರೋ‍ಪಗಳ ಬಗ್ಗೆ ತನಿಖೆ ನಡೆಸಲು ಈ ವರ್ಷದ ಮಾರ್ಚ್‌ನಲ್ಲಿ ಏಕ ಸದಸ್ಯ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸಿಂಗ್ ಅವರು ತನ್ನ ಮುಂದೆ ಹಲವಾರು ಸಲ ಹಾಜರಾಗಲು ವಿಫಲರಾದ ಕಾರಣಕ್ಕಾಗಿ ದಂಡ ವಿಧಿಸಿತ್ತು ಮತ್ತು ಜಾಮೀನು ನೀಡಬಹುದಾದ ವಾರೆಂಟ್‌ ಅನ್ನು ಹೊರಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.