ADVERTISEMENT

ಇಂಡಿಗೊ ಸರ್ವರ್‌ ಸ್ಥಗಿತ:ಪ್ರಯಾಣ ಪರದಾಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 16:19 IST
Last Updated 4 ನವೆಂಬರ್ 2019, 16:19 IST
   

ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಯ ಸರ್ವರ್‌ ಸೋಮವಾರ ಬೆಳಿಗ್ಗೆ ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯನಿರ್ವಹಿಸದೇ ಇದ್ದುದರಿಂದ ದೇಶದಾದ್ಯಂತ ಇಂಡಿಗೊ ವಿಮಾನ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.

ಬೆಳಿಗ್ಗೆ ಸುಮಾರು 11.30ಕ್ಕೆ ಸರ್ವರ್‌ ಸ್ಥಗಿತಗೊಂಡಿತು. ಇದರಿಂದ, ಬೋರ್ಡಿಂಗ್‌ ಟಿಕೆಟ್‌ಗಳನ್ನು ನೀಡುವುದು ಸಾಧ್ಯವಾಗಲಿಲ್ಲ.

ಹೀಗಾಗಿ, ಪ್ರಯಾಣಿಕರು ಸರತಿ ಸಾಲಿನಲ್ಲಿ ದೀರ್ಘಹೊತ್ತು ಕಾಯಬೇಕಾಯಿತು.ಸರ್ವರ್‌ ಸ್ಥಗಿತ ಗೊಂಡು ಪ್ರಯಾಣಿಕರಿಗೆ ತೊಂದರೆ ಉಂಟಾಗಿರುವುದಕ್ಕೆ ಕಂಪೆನಿ ಪ್ರಯಾಣಿಕರ ಕ್ಷಮೆ ಯಾಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.