ADVERTISEMENT

ಅಂತರ ರಾಜ್ಯ ಮಂಡಳಿ ಪುನರ್‌ ರಚನೆ: ಸ್ಥಾಯಿ ಸಮಿತಿಗೆ ಗೃಹ ಸಚಿವ ಶಾ ಅಧ್ಯಕ್ಷ

ಪಿಟಿಐ
Published 23 ಮೇ 2022, 13:55 IST
Last Updated 23 ಮೇ 2022, 13:55 IST
   

ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳ ನಡುವಣ ವಿವಾದಗಳನ್ನು ಪರಿಶೀಲಿಸುವ ಹಾಗೂ ಸಲಹೆ ನೀಡುವ ಅಂತರ ರಾಜ್ಯ ಮಂಡಳಿಯನ್ನು ಪುನರ್‌ ರಚಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿದ್ದಾರೆ.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 6 ಕೇಂದ್ರ ಸಚಿವರು ಅದರ ಸದಸ್ಯರಾಗಿದ್ದಾರೆ. 10 ಮಂದಿ ಕೇಂದ್ರ ಸಚಿವರು ಶಾಶ್ವತ ಆಹ್ವಾನಿತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಗೆಯೇ ಅಂತರ ರಾಜ್ಯ ಮಂಡಳಿಯ ಸ್ಥಾಯಿ ಸಮಿತಿಯನ್ನೂ ಪುನರ್‌ರಚನೆ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅದರ ಅಧ್ಯಕ್ಷರಾಗಿದ್ದಾರೆ.

ADVERTISEMENT

ನಿರ್ಮಲಾ ಸೀತಾರಾಮನ್‌, ನರೇಂದ್ರ ಸಿಂಗ್‌ ತೋಮರ್‌, ವಿರೇಂದ್ರ ಕುಮಾರ್‌ ಮತ್ತು ಗಜೇಂದ್ರ ಸಿಂಗ್‌ ಶೆಖಾವತ್‌ ಅವರೂ ಸ್ಥಾಯಿ ಸಮಿತಿ ಸದಸ್ಯರಾಗಿದ್ದಾರೆ. ಹಾಗೆಯೇ ಆಂಧ್ರಪ್ರದೇಶ, ಅಸ್ಸಾ' ಬಿಹಾರ, ಗುಜರಾತ್‌, ಮಹಾರಾಷ್ಟ್ರ, ಒಡಿಶಾ, ಪಂಜಾಬ್‌ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳೂ ಇದ ಸದಸ್ಯರಾಗಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.