ADVERTISEMENT

ದೆಹಲಿ-ಮೀರತ್ RRTS ಕಾರಿಡಾರ್ ಉದ್ಘಾಟನೆ: ನಮೋ ಭಾರತ್ ರೈಲಿನಲ್ಲಿ ಮೋದಿ ಪ್ರಯಾಣ

ಪಿಟಿಐ
Published 5 ಜನವರಿ 2025, 7:44 IST
Last Updated 5 ಜನವರಿ 2025, 7:44 IST
<div class="paragraphs"><p>ನಮೋ ಭಾರತ್‌ ರೈಲಿನಲ್ಲಿ ಮೋದಿ ಪ್ರಯಾಣ</p></div>

ನಮೋ ಭಾರತ್‌ ರೈಲಿನಲ್ಲಿ ಮೋದಿ ಪ್ರಯಾಣ

   

ನವದೆಹಲಿ: ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ದೆಹಲಿಯ ನ್ಯೂ ಅಶೋಕ್‌ ನಗರದವರೆಗಿನ 13 ಕಿ.ಮೀ ದೂರದ ದೆಹಲಿ-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್‌ಆರ್‌ಟಿಎಸ್) ಕಾರಿಡಾರ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. 

ಇದೇ ವೇಳೆ ಸಾಹಿಬಾಬಾದ್ ನಿಲ್ದಾಣದಿಂದ ನ್ಯೂ ಅಶೋಕ್ ನಗರ ನಿಲ್ದಾಣದವರೆಗೆ ನಮೋ ಭಾರತ್ ರೈಲಿನಲ್ಲಿ ಮೋದಿ ಪ್ರಯಾಣಿಸಿದರು. ತಮ್ಮ ಪ್ರಯಾಣದ ವೇಳೆ ಪ್ರಧಾನಿಯವರು ಮಕ್ಕಳು ಮತ್ತು ಜನರೊಂದಿಗೆ ಸಂವಾದ ನಡೆಸಿದರು.

ADVERTISEMENT

ನ್ಯೂ ಅಶೋಕ್ ನಗರ ಮತ್ತು ಮೀರತ್ ಸೌತ್ ನಡುವೆ 11 ನಿಲ್ದಾಣಗಳಿವೆ. ಪ್ರಯಾಣಿಕರ ಓಡಾಟಕ್ಕೆ ಇಂದು ಸಂಜೆ 5 ರಿಂದ ಪ್ರಾರಂಭವಾಗಲಿದ್ದು, ರೈಲುಗಳು ಪ್ರತಿ 15 ನಿಮಿಷಗಳಿಗೊಮ್ಮೆ ಲಭ್ಯವಿರುತ್ತವೆ.

ಇದೇ ವೇಳೆ ₹12 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.