ADVERTISEMENT

ಜಾಗತಿಕ ಕಡಲ ಶೃಂಗಸಭೆಗೆ ಮೋದಿ ಚಾಲನೆ

ಸಮುದ್ರಯಾನ: ₹23 ಸಾವಿರ ಕೋಟಿ ಯೋಜನೆಗೆ ಚಾಲನೆ

ಪಿಟಿಐ
Published 17 ಅಕ್ಟೋಬರ್ 2023, 20:03 IST
Last Updated 17 ಅಕ್ಟೋಬರ್ 2023, 20:03 IST
ನರೇಂದ್ರ ಮೋದಿ –ಪಿಟಿಐ ಚಿತ್ರ
ನರೇಂದ್ರ ಮೋದಿ –ಪಿಟಿಐ ಚಿತ್ರ   

ಮುಂಬೈ: ದೀರ್ಘಾವಧಿಯಲ್ಲಿ ದೇಶದ ಕಡಲ ಆರ್ಥಿಕತೆಗೆ ಬಲ ನೀಡುವ ನಿಟ್ಟಿನಲ್ಲಿ ₹23 ಸಾವಿರ ಕೋಟಿ ಮೊತ್ತದ ಸಮುದ್ರಯಾನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಬಂದರು ಅಭಿವೃದ್ಧಿ, ಸುಸ್ಥಿರ ಬಳಕೆಗೆ ಉತ್ತೇಜನ ಹಾಗೂ ಅಂತರರಾಷ್ಟ್ರೀಯ ಸಹಯೋಗವನ್ನು ಸುಗಮಗೊಳಿಸುವ ಕಾರ್ಯತಂತ್ರದ ಉಪಕ್ರಮಗಳಿಗೆ ಅನು ಗುಣ ವಾಗಿ ಈ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯುವ ಮೂರನೇ ಆವೃತ್ತಿಯ ಜಾಗತಿಕ ಕಡಲ ಭಾರತ ಶೃಂಗಸಭೆಗೆ ಮೋದಿ ಅವರು ವರ್ಚುವಲ್‌ ಆಗಿ ಚಾಲನೆ ನೀಡಿದರು.

ADVERTISEMENT

ಸಮುದ್ರಯಾನ ಕ್ಷೇತ್ರಕ್ಕೆ ಸಂಬಂಧಿಸಿ ದಂತೆ ಬಂದರುಗಳ ಭವಿಷ್ಯ, ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಪ್ರಮಾಣ ತಗ್ಗಿಸುವಿಕೆ, ಕರಾವಳಿ ಪ್ರದೇಶದಲ್ಲಿ ಹಡಗುಗಳ ರವಾನೆ, ಒಳನಾಡು ಜಲಸಾರಿಗೆ ಸೇರಿದಂತೆ ಹಲವು ವಿಷಯ‌ಗಳ ಬಗ್ಗೆ ಶೃಂಗಸಭೆಯಲ್ಲಿ
ಚರ್ಚಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.