ADVERTISEMENT

ಪ್ರಧಾನ್‌ಮಂತ್ರಿ ಸಂಗ್ರಹಾಲಯ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಪಿಟಿಐ
Published 14 ಏಪ್ರಿಲ್ 2022, 8:14 IST
Last Updated 14 ಏಪ್ರಿಲ್ 2022, 8:14 IST
ಉದ್ಘಾಟನೆಗೂ ಮುನ್ನ ಮೊದಲ ಟಿಕೆಟ್ ಖರೀದಿಸಿದ ಪ್ರಧಾನಿ ನರೇಂದ್ರ ಮೋದಿ
ಉದ್ಘಾಟನೆಗೂ ಮುನ್ನ ಮೊದಲ ಟಿಕೆಟ್ ಖರೀದಿಸಿದ ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಸ್ವಾತಂತ್ರ್ಯಾನಂತರದ ಎಲ್ಲ ಪ್ರಧಾನ ಮಂತ್ರಿಗಳಿಗೆ ಗೌರವ ಸಲ್ಲಿಸುವ ಮತ್ತು ಅವರ ಸ್ಮರಣಾರ್ಥ ಅಪರೂಪದ ವಸ್ತುಗಳ ಮ್ಯೂಸಿಯಂ ‘ಪ್ರಧಾನ್‌ಮಂತ್ರಿ ಸಂಗ್ರಹಾಲಯ‘ವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದರು.

ಸ್ವಾತಂತ್ರ್ಯ ದೊರೆತ ಬಳಿಕ ದೇಶದ ಬೆಳವಣಿಗೆಗೆ ವಿವಿಧ ರೀತಿಯ ಕೊಡುಗೆ ನೀಡಿರುವ ಪ್ರಧಾನಿಗಳ ಕುರಿತು ಈ ಸಂಗ್ರಹಾಲಯದಲ್ಲಿ ಮಹತ್ವದ ಮಾಹಿತಿ ದೊರೆಯಲಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿದೆ.

ಉದ್ಘಾಟನೆಗೂ ಮುನ್ನ ಮೊದಲ ಟಿಕೆಟ್ ಖರೀದಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಗ್ರಹಾಲಯ ವೀಕ್ಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಯುವಜನಾಂಗಕ್ಕೆ ದೇಶವನ್ನಾಳಿದ ಎಲ್ಲ ಪ್ರಧಾನಿಗಳ ನಾಯಕತ್ವ, ಕಾರ್ಯಯೋಜನೆ ಮತ್ತು ದೂರದೃಷ್ಟಿಯ ಪರಿಚಯವನ್ನು ನೂತನ ಸಂಗ್ರಹಾಲಯ ಮಾಡಿಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.